
website ಗೆ ಅರೆಬೆತ್ತಲೆ ಫೋಟೋ ಅಪ್‌ಲೋಡ್ ಮಾಡಿ ಸಿಕ್ಕಿಬಿದ್ದ ಟೀಚರ್ – ಶಾಲೆಗೆಲ್ಲಾ ಡಂಗೂರ ಸಾರಿದ ವಿದ್ಯಾರ್ಥಿ
Monday, December 5, 2022
ಎಡಿನ್ಬರ್ಗ್: ಸ್ಕಾಟ್‌ಲ್ಯಾಂಡ್‌ನಲ್ಲಿ ಶಿಕ್ಷಕಿಯೊಬ್ಬರು ತನ್ನ ಅರೆಬೆತ್ತಲೆ ಪೊಟೋ ವನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ ಕೆಲಸ ಕಳೆದುಕೊಂಡಿದ್ದಾರೆ.
ಕಿರ್ಸ್ಟಿ ಬುಕಾನ್ ಎಂಬ ಶಿಕ್ಷಕಿ ವೆಬ್ ಸೈಟ್ ನಲ್ಲಿ ಅರೆಬೆತ್ತಲೆ ಫೋಟೋವನ್ನು ಅಪ್ಲೋಡ್ ಮಾಡಿ ತನ್ನ ವಿದ್ಯಾರ್ಥಿಯೊಬ್ಬನಿಗೆ ಸಿಕ್ಕಿ ಬಿದ್ದಿದ್ದಾಳೆ. ಆ ನಂತರ ವಿದ್ಯಾರ್ಥಿ ಟೀಚರ್ ನ ಅರೆಬೆತ್ತಲೆ ಫೋಟೋ ವಿಚಾರವನ್ನು ಶಾಲೆಯಲ್ಲಿ ಎಲ್ಲರಿಗೂ ಹೇಳಿದ್ದಾನೆ.
ಶಿಕ್ಷಕಿಯ ಅರೆಬೆತ್ತಲೆ ಪೊಟೋ ವಿಚಾರ ಶಾಲಾ ಆಡಳಿತ ಮಂಡಳಿ ಗಮನಕ್ಕೆ ಬಂದು ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಕಿರ್ಸ್ಟಿ ಬುಕಾನ್ ಸ್ಕಾಟ್‌ಲ್ಯಾಂಡ್‌ನ ಬ್ಯಾನರ್ಮನ್ ಹೈಸ್ಕೂಲ್‌ನಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದಳು. ಬೆಳಗ್ಗೆ ಶಾಲೆಯಲ್ಲಿ ಪಾಠ ಮುಗಿಸಿ ಬರುತ್ತಿದ್ದ ಶಿಕ್ಷಕಿ, ಸಂಜೆ ತನ್ನ ಬೆತ್ತಲೆ ಫೋಟೋವನ್ನು ವಿವಿಧ ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಅಲ್ಲದೇ ವಿವಿಧ ವೆಬ್‌ಸೈಟ್‌ಗಳಿಗಾಗಿ ಅರೆಬೆತ್ತಲೆ ಅವತಾರದಲ್ಲಿ ಫೋಟೋಶೂಟ್ ನ್ನು ಕೂಡ ಮಾಡಿಸಿದ್ದಳು. ಇದರಿಂದ ಆಕೆಗೆ ದೊಡ್ಡ ಮೊತ್ತದ ಆದಾಯ ಬರುತ್ತಿತ್ತು.
ಪ್ರತಿದಿನದಂತೆ ಶಿಕ್ಷಕಿ ತನ್ನ ಅರೆಬೆತ್ತಲೆ ಫೋಟೋವನ್ನು ಅಪ್‌ಲೋಡ್ ಮಾಡುತ್ತಿದ್ದಾಗ, ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಫೋಟೋವನ್ನು ನೋಡಿದ್ದಾನೆ. ನಂತರ ಬಂದವನೇ ಇಡೀ ಶಾಲೆಗೆಲ್ಲಾ ಹೇಳಿದ್ದಾನೆ. ಇದರಿಂದ ಮುಜುಗರಕ್ಕೀಡಾದ ಶಾಲಾ ಆಡಳಿತ ಮಂಡಳಿಯು ಆಕೆಯನ್ನು ಶಾಲೆಯಿಂದ ತೆಗೆದಿದೆ.
ಸದ್ಯ ಕೆಲಸ ಕಳೆದುಕೊಂಡಿರುವ ಶಿಕ್ಷಕಿ, ನನಗೆ ಹನ್ನೊಂದು ವರ್ಷದ ಮಗನಿದ್ದಾನೆ. ಅವನು ದೀರ್ಘಕಾಲದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಹೀಗಾಗಿ ನನ್ನ ಖಾಸಗಿ ಫೋಟೋಗಳನ್ನು ಮಾರಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾಳೆ ಎಂದು ತಿಳಿದುಬಂದಿದೆ.