-->
UDUPI : ಮನೆಯಿಂದ ಹೋರ ಹೋದ ಯುವತಿ ಮರಳಿ ಬಾರದೇ ನಾಪತ್ತೆ

UDUPI : ಮನೆಯಿಂದ ಹೋರ ಹೋದ ಯುವತಿ ಮರಳಿ ಬಾರದೇ ನಾಪತ್ತೆ

ಮನೆಯಿಂದ ಹೊರಗೆ ಹೋದ ಯುವತಿ ವಾಪಾಸು ಮನೆಗೆ ಬಾರದೇ ನಾಪತ್ತೆಯಾದ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಮಾಬುಕಳ ಎಂಬಲ್ಲಿ ನಡೆದಿದೆ. ಇಲ್ಲಿನ ಹಪ್ಪಳಬೆಟ್ಟು ನಿವಾಸಿ ಸಾರಾ ಡೇಸಾ (26) ನಾಪತ್ತೆಯಾದ ಯುವತಿ. 
ನವೆಂಬರ್ 17 ರಂದು ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಳು. ಮನೆಯವರು ಹುಡುಕಾಟ ನಡೆಸಿದರೂ ಸಿಗದೇ ಇದ್ದಾಗ ಕೋಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲು ಮಾಡಿದ್ದಾರೆ. ಯುವತಿ, 5 ಅಡಿ 1 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಕೊಂಕಣಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2564155, ಮೊ.ನಂ: 9480805454, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ 0.0: 0820-2561966, .o: 9480805432 ಅನ್ನು ಸಂಪರ್ಕಿಸಬಹುದಾಗಿದೆ. 

Ads on article

Advertise in articles 1

advertising articles 2

Advertise under the article