
UDUPI : ಯಕ್ಷಗಾನದ ರಂಗಸ್ಥಳಕ್ಕೂ ಬಂತು ಕುಕ್ಕರ್
Tuesday, December 6, 2022
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಬಳಿಕ ಕುಕ್ಕರ್ ಕುರಿತು ಅನೇಕ ಹಾಸ್ಯಗಳು ಬಂದಿದೆ. ಸದ್ಯ ಯಕ್ಷಗಾನದ ಹಾಸ್ಯದಲ್ಲೂ ಕುಕ್ಕರ್ ಬಳಕೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಪ್ಪನಾಡು ಮೇಳದ ಭಂಡಾರ ಚಾವಡಿ ಪ್ರಸಂಗದಲ್ಲಿ ಕೊಡಪದವು ದಿನೇಶ್ ಮತ್ತು ನಂದಿಕೂರು ರಾಮ ಕೃಷ್ಣ ಅವರ ಸಂಭಾಷಣೆಯಲ್ಲಿ ಹಾಸ್ಯಗಾರ ದಿನೇಶ್ ಕೊಡಪದವು, ತನ್ನ ಚೀಲದಿಂದ ಒಂದೊಂದೇ ವಸ್ತುಗಳನ್ನು ತೆಗೆದು ನಂತರ ಕುಕ್ಕರ್ ತೆಗೆಯುವಾಗ ನಂದಿಕೂರು ರಾಮಕೃಷ್ಣ ಹೆದರಿ ಒಡುವ ದೃಶ್ಯ ಇದಾಗಿದೆ.
ಸದ್ಯ ಯಕ್ಷಗಾನದ ರಂಗಸ್ಥಳಕ್ಕೆ ಕುಕ್ಕರ್ ತಂದು ಹಾಸ್ಯ ಮಾಡಿದ ದೃಶ್ಯದ, ಕುರಿತಂತೆ ಸಾಕಷ್ಟು ಪರ ವಿರೋಧ ಚರ್ಚೆ ಹುಟ್ಟು ಹಾಕಿದೆ. ಯಕ್ಷಗಾನದ ರಂಗಸ್ಥಳಕ್ಕೆ ಕುಕ್ಕರ್ ತಂದದ್ದು ಸರಿಯಲ್ಲ. ಈ ರೀತಿಯ ಅತಿರೇಕದ ಹಾಸ್ಯ ಸರಿಯಲ್ಲ ಎನ್ನುವ ವಿರೋಧ ಕೂಡ ವ್ಯಕ್ತವಾಗಿದೆ.