UDUPI : ಗಾಯಗೊಂಡು ಒದ್ದಾಡುತ್ತಿದ್ದರೂ, ದೂರ ಇದ್ದು ಮಾನವೀಯತೆ ಮರೆತ ಜನ ; ಕರುಳು ಹಿಂಡುವ ವಿಡಿಯೋ ವೈರಲ್
Saturday, December 3, 2022
ಉಡುಪಿಯಲ್ಲಿ ಮಾನವೀಯತೆ ಮರೆತು, ಜನ ವರ್ತಿಸಿದ ವಿಡಿಯೋ ವೈರಲ್ ಆಗಿದೆ. ಬದುಕಿಸಲು ಆತನ ಗೆಳೆಯರು ಬನ್ನಿ ಬನ್ನಿ ಅಂತ ಸಾರ್ವಜನಿಕರಲ್ಲಿ ಅಂಗಲಾಚಿದ ವಿಡಿಯೋ, ಕರುಳು ಹಿಂಡುವಂತಿದೆ.
ನಿನ್ನೆ ಕಟಪಾಡಿಯಲ್ಲಿ, ಟಿಪ್ಪರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ, ಉದ್ಯಾವರದ ಸುಕ್ಷಿತ್ ಭಂಡಾರಿ ರಸ್ತೆ ಮಡುವಿನಲ್ಲಿ ಒದ್ದಾಡುತ್ತಿದ್ದ. ಈ ವೇಳೆ ಆತನ ಗೆಳೆಯರು ಸುಕ್ಷಿತ್ ಭಂಡಾರಿಯನ್ನು ಹಿಡಿದು ಯಾರಾದರೂ ಬನ್ನಿ, ರಿಕ್ಷಾವಾದರೂ ಕರೆದುಕೊಂಡು ಬನ್ನಿ ಅಂತ ಅಂಗಲಾಚುತ್ತಿದ್ದರು. ಇಷ್ಟಾದರೂ ಜನ ಮಾತ್ರ ದೂರವೇ ನಿಂತು ನೋಡುತ್ತಿದ್ದರೇ ಹೊರತು ಹತ್ತಿರ ಬರಲೇ ಇಲ್ಲ. ಸದ್ಯ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ಸುಕ್ಷಿತ್ ಭಂಡಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ಪಿದ್ದಾನೆ.