
UDUPI : ರೋಸ್ ಕಾರ್ಯಕ್ರಮದಲ್ಲಿ ಯುವತಿ ಕುಸಿದು ಬಿದ್ದು ಸಾವು ; ವಿಡಿಯೋ ವೈರಲ್
ಉಡುಪಿಯಲ್ಲಿ ನಡೆದ ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿ ಕುಸಿದು ಬಿದ್ದು ಸಾವನ್ಪದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಸ್ರೂರು ಮೂಲದ ಜೋಸ್ನಾ ಲೂವಿಸ್ (23) ಮೃತ ಯುವತಿಯಾಗಿದ್ದು ಈಕೆ, ಸಂಬಂಧಿಕರ ರೋಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದಳು.
ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಕಾರ್ಯಕ್ರಮದಲ್ಲಿ ರೋಸ್ ಸಂಪ್ರದಾಯದಂತೆ ತರಕಾರಿ ಹಿಡಿದು ನಡೆದುಕೊಂಡು ಬರುವಾಗ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಾಳೆ. ತಕ್ಷಣ ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ, ಇಂದು ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ಪಿದ್ದಾಳೆ.