
UDUPI : ರೈಲು ಡಿಕ್ಕಿ ; ಯುವಕ ಸಾವು
ರೈಲು ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಂಕೇಶ್ವರದಲ್ಲಿ ನಡೆದಿದೆ. ಸಂತೋಷ್ (28) ಮೃತ ಯುವಕ.
ಸಂತೋಷ್ ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದಿದ್ದು ದೇಹವು ಛಿದ್ರಗೊಂಡಿತ್ತು. ಸಂತೋಷ್ ಮೃತದೇಹವನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿದ್ದಾರೆ