
UDUPI : ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು
Thursday, November 24, 2022
ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸಾವನ್ಪಿದ ಘಟನೆ
ಉಡುಪಿಯ ಗುಜ್ಜಾಡಿ ಗ್ರಾಮದ ನಾಯಕ್ವಾಡಿ ಜಂಕ್ಷನ್ ನಲ್ಲಿ ನಡೆದಿದೆ.
ಸುಜಯ(20) ಮೃತಪಟ್ಟ ಯುವಕ. ನಾಯಕ್ವಾಡಿ ಜಂಕ್ಷನ್ ಬಳಿ ಇರುವ ನಾಯಕ್ವಾಡಿ ಸಂಗಮೇಶ್ವರ ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ಲೈಟಿಂಗ್ ಹಾಕಲೆಂದು ಮರದ ಕೊಂಬೆ ಕಡಿಯುತ್ತಿದ್ದ, ಈ ವೇಳೆ ವಿದ್ಯುತ್ ಲೈನ್ ತಾಗಿ ಆಘಾತದಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರೂ, ದಾರಿ ಮಧ್ಯೆ ಮೃತಪಟ್ಟಿದ್ದಾನೆ.