
UDUPI : ರಸ್ತೆಯಲ್ಲೇ ವಿದ್ಯಾರ್ಥಿಗಳ ಫೇರ್ ವೆಲ್ ಪಾರ್ಟಿ
ಶಾಲಾ ಕಾಲೇಜುಗಳಲ್ಲಿ ಫೇರ್ ವೆಲ್‌ಗಳನ್ನು ತರಗತಿ ಒಳಗೆ ಅಥವಾ ಮೈದಾನದಲ್ಲಿ ಮಾಡುವುದನ್ನು ನೋಡಿದ್ದೇವೆ. ಆದರೆ ಉಡುಪಿಯ ಮಣಿಪಾಲದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕ ರಸ್ತೆಯಲ್ಲೇ ಪೇರಲ್ ಪಾರ್ಟಿ ಮಾಡಿ ಹುಚ್ಚಾಟ ಮೆರೆದಿದ್ದಾರೆ.
ಖಾಸಗಿ ಕಾಲೇಜಿನ ಫೇರ್ ವೆಲ್ ಹಿನ್ನೆಲೆ ಮಣಿಪಾಲದ ಡಿ ಸಿ ಆಫೀಸ್ ರಸ್ತೆಗೆ ಬಂದ ವಿದ್ಯಾರ್ಥಿಗಳು ರೋಡ್ ನಲ್ಲೇ ಮಧ್ಯ ಸೇವಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ವಿದ್ಯಾರ್ಥಿಗಳ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಬೀದಿಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಿಂದ ಸಾರ್ವಜನಿಕರ ವಾಹನ ಸಂಚಾರಕ್ಕೂ ಕೆಲ ಕಾಲ ಅಡ್ಡಿಯಾಯಿತು.