UDUPI : ನಾಪತ್ತೆಯಾದ ವೈದ್ಯರ ಶವ ಕುಂದಾಪುರದ ರೈಲ್ವೆ ಹಳಿಯಲ್ಲಿ ಪತ್ತೆ
Friday, November 11, 2022
ನವೆಂಬರ್ 8ರಂದು ನಾಪತ್ತೆಯಾದ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ವೈದ್ಯರ ಶವ ಕುಂದಾಪುರ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಬದಿಯಡ್ಕದ ದಂತ ವೈದ್ಯ ಡಾ. ಕೃಷ್ಣಮೂರ್ತಿ ಅವರು ನವೆಂಬರ್ 8ರಂದು ಬದಿಯಡ್ಕದಲ್ಲೇ ಬೈಕ್, ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದರು. ಈ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿ, ಹುಡುಕಾಟ ಕೂಡ ನಡೆದಿತ್ತು. ಸದ್ಯ ಇವರ ಶವ ಹಟ್ಟಿಯಂಗಡಿ ಗ್ರಾಮದ ಅಜ್ಜಿ ಮನೆಯಲ್ಲಿರುವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣದಂತೆ ಕಂಡು ಬಂದಿದೆ. ಜಮೀನಿನ ತಕರಾರಿನ ಹಿನ್ನೆಲೆಯಲ್ಲಿ ಕಿರುಕುಳ ಅನುಭವಿಸಿದ್ದರು ಎನ್ನಲಾಗಿದೆ. ಅಲ್ಲದೇ ಯುವತಿಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆಂದು ವೈದ್ಯರ ಮೇಲೆ ದೂರು ದಾಖಲಾಗಿತ್ತು. ಈ ಘಟನೆಯಿಂದ ಕುಗ್ಗಿ ಹೋಗಿ ಬದಿಯಡ್ಕದಿಂದ ವೈದ್ಯರು ಕಣ್ಮರೆಯಾಗಿದ್ದರು.