Cinema : ನಾನು ಇಷ್ಟು ಬೇಗ ಸಾಯಲ್ಲ, ನಟಿ ಸಮಂತಾ ಹೀಗೆ ಹೇಳಿದ್ದು ಯಾಕೆ ಗೊತ್ತಾ..?
Wednesday, November 9, 2022
ನಾನು ಇಷ್ಟು ಬೇಗ ಸಾಯಲ್ಲ ಅಂತ, ಖ್ಯಾತ ನಟಿ ಸಮಂತಾಳ ಈ ಮಾತು ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆ ಆಗ್ತಾ ಇದೆ. ಅಷ್ಟಕ್ಕೂ ಖ್ಯಾತ ನಟಿ, ಹೀಗೆ ಯಾಕೆ ಹೇಳಿದ್ರೂ ಗೊತ್ತಾ..ಅದಕ್ಕೂ ಕಾರಣವಿದೆ. ಆಕೆಯ ಮನಸ್ಸಿನಲ್ಲಿ ತುಂಬಾ ನೋವಿದೆ.
ಹೌದು.. ಸಮಂತಾ ಮಯೋಸೈಟಿಸ್ ಎನ್ನುವ ದೀರ್ಘಕಾಲದ ಸ್ನಾಯು ರೋಗದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ, ಯಶೋದ' ಸಿನಿಮಾ ಪ್ರಚಾರಕ್ಕಾಗಿ ನೀಡಿದ ತಮಿಳು, ತೆಲುಗು ಸಂದರ್ಶನಗಳಲ್ಲಿ ಸಮಂತಾ ತಮ್ಮ ಆರೋಗ್ಯದ ಬಗ್ಗೆ ಕೂಡ ವಿವರವಾಗಿ ಮಾತನಾಡಿದ್ದಾರೆ.
ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಶೀಘ್ರದಲ್ಲೇ ಸಾಯುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನನಗೆ ಪ್ರಾಣಾಪಾಯವಿದೆ, ಬದುಕಲ್ಲ ಅಂತೆಲ್ಲಾ ಏನೇನೋ ಸುದ್ದಿ ಹರಿದಾಡಿತು. ಇಲ್ಲ ನಾನು ಇಷ್ಟು ಬೇಗ ಸಾಯುವುದಿಲ್ಲ. ಇದು ಅಟೊ ಇಮ್ಯೂನ್ ಕಂಡೀಷನ್. ಇದು ಬರಿದಾಗುತ್ತಿದೆ ಮತ್ತು ದಣಿದಿದೆ. ನಾನು ಹೋರಾಟಗಾರ್ತಿ, ಹೋರಾಡುತ್ತಲೇ ಇರುತ್ತೀನಿ" ಎಂದು ಸಮಂತಾ ಅಂತ ಸಂದರ್ಶನದಲ್ಲಿ ಹೇಳಿದ್ದಾರೆ. ಸದ್ಯ ಸಮಂತಾ ಮಾತು ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.