
UDUPI : ಪ್ರವಾಸಕ್ಕೆ ಬಂದ ಮಕ್ಕಳಿಗೆ ಹೊಡೆಯೋದು ಸರಿನಾ ಮೇಷ್ಟೇ? ವಿದ್ಯಾರ್ಥಿಗಳಿಗೆ ಏಟು ನೀಡುತ್ತಿರುವ ಶಿಕ್ಷಕ ; ವಿಡಿಯೋ ವೈರಲ್
Sunday, November 27, 2022
ಪ್ರವಾಸಕ್ಕೆ ಅಂತ ಮಕ್ಕಳನ್ನು ಕರೆದುಕೊಂಡು ಬಂದು, ದೇವಸ್ಥಾನದ ಮುಂದೆಯೇ ವಿದ್ಯಾರ್ಥಿಗಳಿಗೆ ಶಿಕ್ಷಕನೊರ್ವ ಬೆತ್ತದಿಂದ ಬಾರಿಸುವ ವಿಡಿಯೋ ವೈರಲ್ ಆಗಿದೆ.
ಆನೆಗುಡ್ಡೆ ಶ್ರೀವಿನಾಯಕ ಟೆಂಪಲ್‌ಗೆ ಚಿತ್ರದುರ್ಗದ ಮೂಲದ ಶಾಲಾ ವಿದ್ಯಾರ್ಥಿಗಳು ಟೂರ್ ಅಂತ ಬಂದಿದ್ರು. ಈ ವೇಳೆ ದೇವಸ್ಥಾನ ನೋಡಿ ಬಸ್ ಹತ್ತಲು ತಡ ಮಾಡಿದ ವಿದ್ಯಾರ್ಥಿಗಳಿಗೆ ಶಿಕ್ಷಕ ಬೆತ್ತದಿಂದ ಬಾರಿಸಿದ್ದಾರೆ.
ಶಿಕ್ಷಕನ ಈ ವರ್ತನೆಗೆ ಕೋಪಗೊಂಡ ಪ್ರವಾಸಿಗರು, ಶಿಕ್ಷಕನನ್ನು ತರಾಟೆಗೆ ತೆಗದುಕೊಂಡಿದ್ದಾರೆ. ವಿಚಾರಿಸಲು ಬಂದ ಪ್ರವಾಸಿಗರಿಗೂ ಶಿಕ್ಷಕ ಈ ವೇಳೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಹೀಗಾಗಿ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರವಾಸಿಗರು ಸಾಮಾಜಿಕ ಜಾಲಾತಾಣದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಪೇಸದ ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ, ಶಿಕ್ಷಕನ ಆಕ್ರೋಶ ಹೊರ ಹಾಕಿದ್ದಾರೆ.