-->

 ಮಂಗಳೂರು-ಸಮಸ್ಯೆ ಪರಿಹಾರಕ್ಕೆ ವಿದ್ಯುತ್ ಆದಾಲತ್

ಮಂಗಳೂರು-ಸಮಸ್ಯೆ ಪರಿಹಾರಕ್ಕೆ ವಿದ್ಯುತ್ ಆದಾಲತ್ಮಂಗಳೂರು:- ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಪ್ರತಿ ತಿಂಗಳ 3ನೇ ಶನಿವಾರ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 19, ಡಿಸೆಂಬರ್ 17ರಂದು ಹಾಗೂ 2023ರ ಜನವರಿ 21ರಂದು ಅಯೋಜಿಸಲಾಗಿದೆ.
 
    ನ.19ರಂದು ಮಂಗಳೂರು ತಾಲೂಕಿನ ನೀರುಮಾರ್ಗ, ಅಂಬ್ಲಮೊಗರು, ಬಡಗುಳಿಪಾಡಿ, ಮುಲ್ಕಿ ತಾಲೂಕಿನ ಎಕ್ಕಾರು, ಮೂಡಬಿದ್ರೆ ತಾಲೂಕಿನ ಕಡಂದಲೆ, ಪುತ್ತೂರು ತಾಲೂಕಿನ ಕಲಕ, ನೆಟ್ಟಣಿಗೆ ಮುಡ್ನೂರು, ಸುಳ್ಯ ತಾಲೂಕಿನ ಮುರುಳ್ಯ, ಐವರ್ನಾನಾಡು, ಕಡಬ ತಾಲೂಕಿನ ನೂಜಿಬಾಳ್ತಿಲ, ಬಂಟ್ವಾಳ ತಾಲೂಕಿನ ಕುರ್ನಾಡು ಮೂಡನಡುಗೂಡು, ಇರಾ, ಬೆಳ್ತಂಗಡಿ ತಾಲೂಕಿನ ಕಣಿಯೂರು ಹಾಗೂ ನರಿಯಾ.

   ಡಿ.17ರಂದು ಮಂಗಳೂರು ತಾಲೂಕಿನ ಅರ್ಕುಳ, ಹರೇಕಳ, ಕುಳವೂರು, ಮುಲ್ಕಿ ತಾಲೂಕಿನ ಬಳ್ಕುಂಜೆ, ಮೂಡಬಿದ್ರೆ ತಾಲೂಕಿನ ಬೆಳುವಾಯಿ, ಪುತ್ತೂರು ತಾಲೂಕಿನ ಬಡಗನ್ನೂರು, ಸುಳ್ಯ ತಾಲೂಕಿನ ಮಕರ್ಂಜ, ಕಡಬ ತಾಲೂಕಿನ ಸುಬ್ರಮಣ್ಯ, ರಾಮಕುಂಜ, ನೆಲ್ಯಾಡಿ, ಬಂಟ್ವಾಳ ತಾಲೂಕಿನ ತುಂಬೆ, ಚೆನೈತ್ತೋಡಿ, ಪುಣಚ, ಬೆಳ್ತಂಗಡಿ ತಾಲೂಕಿನ  ಹೊಸಂಗಡಿ, ಬಡಕೋಡಿ ಹಾಗೂ ನಿಡ್ಲೆ.

     2023ರ ಜನವರಿ 21ರಂದು ಮಂಗಳೂರು ತಾಲೂಕಿನ ಮೂಡುಶೆಡ್ಡೆ, ಕೋಣಾಜೆ, ಮೂಳೂರು, ಮುಲ್ಕಿ ತಾಲೂಕಿನ ಕಿಲ್ಪಾಡಿ, ಮೂಡಬಿದ್ರೆ ತಾಲೂಕಿನ ಪುತ್ತಿಗೆ, ಪುತ್ತೂರು ತಾಲೂಕಿನ ಆರ್ಯಪು, ವೀರಮಂಗಲ, ಸುಳ್ಯ ತಾಲೂಕಿನ ದೇವಚಳ್ಳ, ಮಂಡೆಕೋಲು, ಕಡಬ ತಾಲೂಕಿನ ಗೋಳಿತೊಟ್ಟು, ಬಂಟ್ವಾಳ ತಾಲೂಕಿನ ಗೋಳ್ತಮಜಲು, ಸಂಗಬೆಟ್ಟು, ಅನಂತಾಡಿ, ಬೆಳ್ತಂಗಡಿ ತಾಲೂಕಿನ ಸೋಣಂದೂರು, ಮಾಲಾಡಿ ಹಾಗೂ ಬೆಳಾಲು ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99