UDUPI ; ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಮೀನಿನ ಲಾರಿ
Wednesday, October 26, 2022
ಚಾಲಕನ ನಿಯಂತ್ರಣ ತಪ್ಪಿ ಮೀನಿನ ಲಾರಿ ರಸ್ತೆಯಲ್ಲಿ ಮಗುಚಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಕಾಪುವಿನ ಉಚ್ಚಿಲ ಮೂಳೂರು ಸಲಪಿ ಮಸೀದಿ ಬಳಿ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ, ಮೀನು ಟ್ರೇ ತುಂಬಿದ ಲಾರಿ ಉಚ್ಚಿಲ ಮೂಳೂರು ಸಲಪಿ ಮಸೀದಿ ಬಳಿ ರಸ್ತೆ ಕಾಮಗಾರಿಯು ಸಲುವಾಗಿ ಡೈವರ್ಶನ್ ಇದ್ದುದನ್ನು ಗಮನಿಸದೆ ನಿಯಂತ್ರಣ ತಪ್ಪಿ ಲಾರಿ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮೀನು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.