
UDUPI : ಆಗಸಕ್ಕೆ ಚಿಮ್ಮಿದಿ ನದಿ ನೀರು.." ಇದು ಸುಳಿಗಾಳಿ ಚಮತ್ಕಾರ "
ನದಿ ಮದ್ಯದಲ್ಲಿ ಕಾಣಿಸಿಕೊಂಡ ಸುಳಿಗಾಳಿಯಿಂದ ನದಿ ನೀರು ಆಕಾಶದೆಡೆಗೆ ಚಿಮ್ಮಿದ ವಿಶಿಷ್ಟ ದೃಶ್ಯ ಉಡುಪಿಯ ಅಂಬಲಪಾಡಿ, ಕಿದಿಯೂರು ಚಕ್‌ಪಾದೆಯಲ್ಲಿ ತೀರದ
ಪಾಪನಾಶಿನಿ ನದಿಯಲ್ಲಿ ಕಂಡು ಬಂದಿದೆ.
ಸಾಮಾನ್ಯವಾಗಿ ಮೈದಾನದಲ್ಲಿ ಸುಳಿಗಾಳಿ ಕಾಣಿಸಿಕೊಂಡು, ದೂಳು ಮೇಲಕ್ಕೆ ಹೋಗುವುದು ಕಾಣ ಸಿಗುತ್ತೆ, ಆದ್ರೆ ಇಲ್ಲಿ ಪಾಪಾನಾಶಿನಿ ನದಿಯಲ್ಲಿ, ಸುಳಿ ಗಾಳಿ ಕಾಣಿಸಿಕೊಂಡು ಸುಳಿಯಾಕಾರದಲ್ಲೇ ಅಗಸಕ್ಕೆ ನೀರು ಚಿಮ್ಮುತ್ತ ಹೋಗುತ್ತಿತ್ತು, ಸ್ಥಳೀಯರು ಈ ಅಪರೂಪದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ..