
UDUPI : ಲಾರಿ ಟಯರ್ ಚೋರರು ಅಂದರ್
ಉಡುಪಿಯ ಶೀರೂರು ಟೋಲ್ ಬಳಿ ರಾತ್ರಿ ವೇಳೆ ನಿಲ್ಲಿಸಿದ್ದ ಲಾರಿಯ ಟಯರ್ ಕದಿಯುತ್ತಿದ್ದ ಅಂತರಾಜ್ಯ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಶ್ಯಾಮ ಶಂಕರ್ (24) ಆಕಾಶ್ ಬಪ್ಪ ಶಿಂಧೆ (19) ಹಾಗೂ ಅಮೂಲ್ ರಾಮ ಕಳೆ (22) ಬಂಧಿತರು.
ಎರಡು ದಿನಗಳ ಹಿಂದೆ ಅಂಕೋಲ ಮೂಲದ ಪುರುಷೋತ್ತಮ್ ಅವರು ತಮ್ಮ ಹೊಸ ಲಾರಿಯನ್ನ ಟೋಲ್ ಬಳಿ ನಿಲ್ಲಿಸಿ ವಿಶ್ರಾಂತಿಗೆ ಜಾರಿದ್ದರು.
ಈ ವೇಳೆ, ಮಂಪರು ಬರಿಸುವ ಸ್ಪ್ರೇ ಹೊಡೆದು ಕ್ಷಣಮಾತ್ರದಲ್ಲಿ ಐದು ಟಯರ್ ಕಳವು ಮಾಡಲಾಗಿತ್ತು. ಪ್ರಕರಣ ಭೇದಿಸಿದ ಬೈಂದೂರು ಪೊಲೀಸರು, ಸಿಸಿಟಿಟಿ ದೃಶ್ಯಾವಳಿಯ ಆಧಾರದ ಮೇಲೆ ಕಳ್ಳರನ್ನ ಪತ್ತೆ ಹಚ್ಚಿದ್ದಾರೆ. ಬೈಂದೂರು ತಾಲೂಕಿನ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66 ಬಳಿ ಆರೋಪಿಗಳ ಬಂಧನ ಮಾಡಲಾಗಿದ್ದು, ಆರೋಪಿಗಳಿಂದ ಕಳವು ಮಾಡಿದ 1 ಲಕ್ಷದ 85 ಸಾವಿರ ಮೌಲ್ಯದ ಐದು ಟಯರ್ ಹಾಗೂ ಕೃತ್ಯಕ್ಕೆ ಬಳಸಿದ ಲೈಲಾಂಡ್ ಲಾರಿ ವಶಕ್ಕೆ ಪಡೆಯಲಾಗಿದೆ.