
UDUPI :ಸಾಲದ ಹೊರೆಯಿಂದ ಬೇಸೆತ್ತು ಮಹಿಳೆ ಆತ್ಮಹತ್ಯೆ
ಸಾಲದ ಹೊರೆಯಿಂದ ನೊಂದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಕೊಡವೂರು ಕಾನಂಗಿಯಲ್ಲಿ ನಡೆದಿದೆ. ಬೀನಾ (34)ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಕೊಡವೂರು ಕಾನಂಗಿಯ ಬೀನಾ ಅವರಿಗೆ ಮದುವೆ ಆಗಿ 4 ವರ್ಷ ಆಗಿದ್ದು, 9 ತಿಂಗಳ ಹಿಂದೆ ಬೀನಾ ಅವರ ಪತಿ ಗುಂಡಿಬೈಲು ನಿವಾಸಿ ನಿತ್ಯಾನಂದ ಎಂಬವರು ಆರ್ಥಿಕ ಅಡಚಣೆ ಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿದ್ದರು. ಆದರೂ, ಪತಿಯ ಮರಣದ ಬಳಿಕ ಸಾಲದ ಹೊರೆ ಬೀನಾ ಅವರ ಮೇಲೆ ಇತ್ತು. ಹೀಗಾಗಿ ಬೀನಾ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.