
UDUPI : ಇಬ್ಬರ ಸಾವಿಗೆ ಕಾರಣವಾಗಿ, ಪರಾರಿಯಾಗಿದ್ದ ಲಾರಿ ಚಾಲಕ ವಶಕ್ಕೆ
ಉಡುಪಿ ಜಿಲ್ಲೆಯ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ, ತಂದೆ, ಮಗನಿಗೆ ಲಾರಿ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾಗಿ ಪರಾರಿಯಾಗಿದ್ದ ಲಾರಿಯನ್ನು ಮೂಡಬಿದ್ರೆಯಲ್ಲಿ ತಡೆದು, ಲಾರಿ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಬೆಳಗ್ಗೆ ಬೆಳಗಾವಿಯಿಂದ ಬಸ್ಸಿನಲ್ಲಿ ಬಂದು, ರಸ್ತೆ ಬದಿಯಲ್ಲಿ ನಿಂತಿದ್ದ ತಂದೆ ಹಾಗೂ ಮಗನಿಗೆ ಲಾರಿ ಡಿಕ್ಕಿಯಾದ ಪರಿಣಾಮ ತಂದೆಯ ಸ್ಥಳದಲ್ಲೇ ಮೃತಪಟ್ಟು, ಮಗ ಗಂಭೀರ ಗಾಯಗೊಂಡಿದ್ದ.
ಈ ವೇಳೆ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದ. ಲಾರಿ ಮಹಾರಾಷ್ಟ್ರದ ಸೂರತ್ ನಿಂದ, ಪ್ಲಾಸ್ಟಿಕ್ ಸಲಕರಣೆ ಮಾಡುವ ಕಚ್ಚಾವಸ್ತುಗಳನ್ನು ಹೇರಿಕೊಂಡು ಮೂಡಬಿದರೆ ಸಮೀಪದ ಗಂಜಿಮಠ ಎಂಬಲ್ಲಿನ ಫ್ಯಾಕ್ಟರಿಗೆ ಹೊರಟಿತ್ತು. ಬುಧವಾರ ಬೆಳಗ್ಗೆ ಉಚ್ಚಿಲ ಬಳಿ ಬರುತ್ತಿದ್ದಂತೆ ಚಾಲಕನ ನಿದ್ದೆಯ ಮಂಪರಿನಿಂದಾಗಿ ಲಾರಿ ರಸ್ತೆ ಬಿಟ್ಟು, ರಸ್ತೆ ಪಕ್ಕದಲ್ಲಿ ನಿಂತಿದ್ದ ತಂದೆ ಮಗನಿಗೆ ಡಿಕ್ಕಿಯಾಗಿ ಪರಾರಿಯಾದ್ದ. ಲಾರಿ ಹಾಗೂ ಚಾಲಕ ಪಡುಬಿದ್ರಿ ಪೊಲೀಸರ ವಶದಲ್ಲಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.