UDUPI : ನಶೆ ಏರಿಸಿಕೊಂಡ ಬಸ್ ಚಾಲಕ, ಬಸ್‌ನಿಂದ ಇಳಿದು ರಸ್ತೆಯಲ್ಲೇ ಮಲಗಿದ : ವಿಡಿಯೋ ವೈರಲ್
Wednesday, September 14, 2022
ಮದ್ಯ ಸೇವನೆ ಮಾಡಿದ ಖಾಸಗಿ ಬಸ್ ಚಾಲಕನೊಬ್ಬ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ, ನಶೆಯಿಂದ ಎದ್ದು ನಿಲ್ಲಲಾಗದೇ ರಸ್ತೆಯಲ್ಲೇ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿಯ ಕುಂದಾಪುರ ಮೂಲದ ಭಾರತಿ ಬಸ್ಸಿನ ಚಾಲಕ ಕುಡಿದು, ಕುಂದಾಪುರದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ, ಮಾರ್ಗ ಮಧ್ಯೆ, ಈತನ ತಲೆಗೆ ನಶೆ ಏರಿದ್ದು, ಈ ವೇಳೆ ಬಸ್ ನಿಲ್ಲಿಸಿ ಬಸ್‌ನಿಂದ ಇಳಿದು, ತೂರಾಡುತ್ತಾ ರಸ್ತೆಯಲ್ಲೇ ಬಿದ್ದಿದ್ದಾನೆ. ಬಸ್ ನಿಲ್ಲಿಸಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಘಟನೆ ನಂತರ ಬೇರೆ ಡೈವರ್‌ನನ್ನು ಕರೆಸಿಕೊಂಡು, ಪ್ರಯಾಣ ಮುಂದುವರಿಸಲಾಯಿತು ಎನ್ನಲಾಗಿದೆ. ಈ ಘಟನೆಯನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ವೈರಲ್ಲಾಗುತ್ತಿದೆ.