
National: ತಿರುಪತಿ ತಿಮ್ಮಪ್ಪನ ಆಸ್ತಿ ಎಷ್ಟು ಕೋಟಿ ಗೊತ್ತಾ..!
Tuesday, September 27, 2022
ವಿಶ್ವದ ಶ್ರೀಮಂತ ದೇವಸ್ಥಾನ ಅಂದ್ರೆ ತಿರುಪತಿ ತಿಮ್ಮಪ್ಪನ ಸನ್ನಿಧಿ. ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನದ ಒಟ್ಟು ಆಸ್ತಿ ಎಷ್ಟಿರಬಹುದು ಅನ್ನೋದು ಎಲ್ಲರಿಗೂ ಕುತೂಹಲ ಇರುತ್ತೆ ಅಲ್ವಾ, ಎಷ್ಟು ಅಂತ ನಾವು ಹೇಳ್ತೀವಿ.
ದೇವಸ್ಥಾನದ ಆಡಳಿತ ಮಂಡಳಿ ಮೊದಲ ಬಾರಿಗೆ
ತಿರುಪತಿ ತಿಮ್ಮಪ್ಪನ ಆಸ್ತಿಯ ವಿವರ ಬಹಿರಂಗ ಪಡಿಸಿದೆ. ಒಟ್ಟು ಸ್ಥಿರಾಸ್ತಿ ಬಗ್ಗೆ ಟಿಟಿಡಿ ಶ್ವೇತಪತ್ರ ಬಿಡುಗಡೆ ಮಾಡಿದ್ದು, ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್ ನೀಡಿದ ಮಾಹಿತಿ ಪ್ರಕಾರ, ದೇವಸ್ಥಾನ ಹಾಗೂ ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರೂ ಮೌಲ್ಯದಷ್ಟು ಸ್ಥಿರಾಸ್ತಿ ಹೊಂದಿದೆ ಅಂತ ಹೇಳಿದ್ದಾರೆ.
ದೇಶದ ಒಟ್ಟು 7123 ಎಕರೆ ಪ್ರದೇಶದಲ್ಲಿ ದೇಗುಲದ 960 ಸ್ಥಿರಾಸ್ತಿಗಳಿವೆಯಂತೆ, ಅಲ್ಲದೇ ವಿವಿಧ ಸರ್ಕಾರಿ ಬ್ಯಾಂಕ್‌ಗಳಲ್ಲಿ 14 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಠೇವಣಿ ಮಾಡಲಾಗಿದೆ. ಭಂಡಾರದಲ್ಲಿ 14 ಸಾವಿರ ಕೆ.ಜಿ ಚಿನ್ನ ಇದೆ ಅಂತ ಟಿಟಿಡಿ ತಿಳಿಸಿದೆ.