
ಮಂಗಳೂರಿನಲ್ಲಿ ಶಂಕಿತ ಉಗ್ರ ಮಾಝ್ ತಂದೆ ಗೆ HEART ATTACK
ಮಂಗಳೂರು: ಇತ್ತೀಚೆಗೆ ಶಿವಮೊಗ್ಗ ಪೊಲೀಸರಿಂದ ಬಂಧಿತನಾದ ಶಂಕಿತ ಉಗ್ರ ಮಾಝ್ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಂಗಳೂರಿನ ನಿನಾಸಿಯಾದ ಮುನೀರ್ ಅಹಮದ್(52) ಮೃತಪಟ್ಟವರು. ಇವರು ಶಂಕಿತ ಉಗ್ರ ಮಾಝ್ ತಂದೆ. ಮಾಝ್ ಬಂಧನದ ಬಳಿಕ ಮುನೀರ್ ಅಹಮದ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.
ಅವರಿಗೆ ಇಂದು ಸಂಜೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಮುನೀರ್ ಅಹಮದ್ ಸಾವನ್ನಪ್ಪಿದ್ದಾರೆ.