ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಧನ ಸಹಾಯ
Thursday, September 22, 2022
ಮೂಡುಬಿದಿರೆ: ಡಿಸೆಂಬರ್ 21 ರಿಂದ 27 ರವರೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಕೀರ್ಣದಲ್ಲಿ ಜರುಗಲಿರುವ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಆಳ್ವಾಸ್ ಫಿಝೇರಿಯಾ ಹಾಗೂ
ಮೂಡುಬಿದಿರೆಯ ಭಾರತ್ ಚಿಕನ್ ಸೆಂಟರ್‌ನ ಮಾಲಕ ಎಂ.ಎಸ್ ಜೈನುದ್ದೀನ್ ರೂ 1 ಲಕ್ಷ ಮೊತ್ತದ ಚೆಕ್‌ನ್ನು ದೇಣಿಗೆ ರೂಪದಲ್ಲಿ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ದ.ಕ ಜಿಲ್ಲಾ ಮುಖ್ಯ ಆಯುಕ್ತರಾದ ಡಾ.ಎಂ ಮೋಹನ್ ಆಳ್ವರಿಗೆ ಹಸ್ತಾಂತರಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯಹಸ್ತ ನೀಡುವ ಕುರಿತು ಭರವಸೆ ನೀಡಿದರು.