Cinema : ಜಾಕ್ವೆಲಿನ್ ರಕ್ಕಮ್ಮನಿಗೆ ಬಿಗ್ ರಿಲೀಫ್ ಯಾಕೆ ಗೊತ್ತಾ...!
Monday, September 26, 2022
ಬಾಲಿವುಡ್ ಬೆಡಗಿ, ವಿಕ್ರಾಂತ್ ರೋಣಾದಲ್ಲಿ ರಕ್ಕಮ್ಮನಾಗಿ ಮಿಂಚಿದ್ದ ಜಾಕ್ವೆಲಿನ್ ಫರ್ನಾಂಡಿಸ್‌ಗೆ 200 ಕೋಟಿ ಮನಿ ಲಾಂಡರಿಂಗ್ ಆರೋಪ ಪ್ರಕರಣಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.
ದೆಹಲಿಯ ಪಟಿಯಾಲ ಕೋಟ್ ರಕ್ಕಮ್ನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, 50 ಸಾವಿರ ಮೌಲ್ಯದ ಬಾಂಡ್ ಕೂಡ ಸಲ್ಲಿಸಲು ಸೂಚಿಸಿದೆ. ಈ ಮೂಲಕ ಬಂಧನದ ಭೀತಿ ತಪ್ಪಿದೆ.
ಉದ್ಯಮಿ ಚಂದ್ರಶೇಖರ್‌ರಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಬರೋಬ್ಬರಿ 7 ಕೋಟಿ ಮೌಲ್ಯದ ಚಿನ್ನಾಭರಣವನ್ನು ಉಡುಗೊರೆ, ಅಲ್ಲದೇ ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳನ್ನ ಗಿಫ್ಟ್ ಆಗಿ ಪಡೆದುಕೊಂಡಿದ್ದಾರೆ ಎನ್ನುವ ಆರೋಪವಿದೆ.
ಉದ್ಯಮಿ ಸುಕೇಶ್ ಜೊತೆಗಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಉದ್ಯಮಿ ಸುಕೇಶ್ ಜೊತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಜಾಕ್ವೆಲಿನ್, ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. 8 ಗಂಟೆಗಳ ಕಾಲ ಇಡಿ ವಿಚಾರಣೆಯನ್ನು ಎದುರಿಸಿದ್ದಾರೆ.