UDUPI : ಮನೆಗೆ ನುಗ್ಗಿ ಹಲ್ಲೆ, ಜೀವ ಬೆದರಿಕೆ
Thursday, August 18, 2022
ಬಾಡಿಗೆ ಮನೆಯೊಂದಕ್ಕೆ ನುಗ್ಗಿದ ಮೂವರು, ಆವಾಚ್ಯ ಶಬ್ದದಲ್ಲಿ ನಿಂದಿಸಿ, ಹಲ್ಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾದೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಕೊಲ್ಲಬೆಟ್ಟು ವಿನೋದ್ ಕುಮಾರ್ ಅವರ ಬಾಡಿಗೆ ನುಗ್ಗಿದ ಮೂವರು, ವಿನೋದ್ ಕುಮಾರ್ ಅವರಿಗೆ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ಮಾಡಿದ್ದು, ಅಲ್ಲದೇ ಮನೆಗೆ ಹಾನಿ ಮಾಡಿದ್ದಾರೆ ಅಂತ ದೂರಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ವಿನೋದ್ ಕುಮಾರ್ ಅವರು, ಐವನ್ ಪಿಂಟೋ, ರೊನಾಲ್ಡ್ ಪಿಂಟೋ ಹಾಗೂ ಅನಿಲ್ ನಜರತ್ ವಿರುದ್ಧ ಮನೆಗೆ ಹಾನಿ ಮಾಡಿ 15,000 ನಷ್ಟ ಮಾಡಿದ್ದಾರೆ. ಅಲ್ಲದೇ ಬೈದು ಜೀವ ಬೆದರಿಕೆ ಹಾಕಿದ್ದಾರೆಂದು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.