UDUPI : ಸ್ಕೂಟರ್‌ಗೆ ಢಿಕ್ಕಿ ಹೊಡೆದ ಬುಲೇಟ್ : ಸ್ಕೂಟರ್ ಸವಾರ ಸಾವು
Thursday, August 18, 2022
ಬುಲೆಟ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಕೋಟೆಬೆಟ್ಟು ಕ್ರಾಸ್ ಬಳಿ ನಡೆದಿದೆ.
ಕೆ. ಭಾಸ್ಕರ ಶೆಟ್ಟಿ ಮೃತ ಸ್ಕೂಟರ್ ಸವಾರ. ಕೋಟೆಬೆಟ್ಟು ಕ್ರಾಸ್‌ನಿಂದ ಸಿದ್ದಾಪುರ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ, ಸಿದ್ದಾಪುರ ಕಡೆಯಿಂದ ಅಂಪಾರು ಕಡೆಗೆ ಬರುತ್ತಿದ್ದ ಬುಲೆಟ್ ಸವಾರ ಅರವಿಂದ ಯಡಿಯಾಳ ಎಂಬಾತ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಕೂಟರ್ ಸಮೇತ ಭಾಸ್ಕರ್ ಶೆಟ್ಟಿ ರಸ್ತೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.