
UDUPI : ಉಡುಪಿಯಲ್ಲಿ ಭುಗಿಲೆದ್ದ ಸಾವರ್ಕರ್ ಬ್ಯಾನರ್ ವಿವಾದ..!
Wednesday, August 17, 2022
ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಅಳವಡಿಸಿದ ಸಾವರ್ಕರ್ ಬ್ಯಾನರ್ ಕುರಿತಾಗಿ ಪರ ವಿರೋಧಗಳು ವ್ಯಕ್ತವಾಗಿದ್ದು, ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹಿಂದೂ ರಾಷ್ಟ್ರದ ಹೆಸರಿನಲ್ಲಿ ಅಳವಡಿಸಿದ ಬ್ಯಾನರ್‌ಗೆ ಉಡುಪಿ ನಗರ ಸಭೆ ಅಗಸ್ಟ್ 25ರ ವರೆಗೆ ಅನುಮತಿ ನೀಡಿದ್ದು, ಪಿಎಫ್‌ಐ ಹಾಗೂ ಕಾಂಗ್ರೆಸ್ ಇದನ್ನು ತೆರವುಗೊಳಿಸುವಂತೆ ಒತ್ತಾಯ ಮಾಡಿದೆ. ಇನ್ನೂ ಬಿಜೆಪಿ ಕಾರ್ಯಕರ್ತರು, ಇಂದು ಸಾವರ್ಕರ್ ಇರುವ ಬ್ಯಾನರ್‌ಗೆ ಹೂ ಹಾರ ಹಾಕಿ, ಪುಷ್ಪಾರ್ಚನೆ ಮಾಡಿದರು, ಈ ವೇಳೆ ಮಾತನಾಡಿದ, ಬಿಜೆಪಿ ಮುಖಂಡ ಯಸ್‌ಪಾಲ್ ಸುವರ್ಣ , ಶೀಘ್ರವಾಗಿ ಇಲ್ಲಿಯೇ ಸಾವರ್ಕರ್ ಪುತ್ಥಳಿ ಅನಾವರಣ ಮಾಡಿ, ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡುತ್ತೇವೆ. ಉಡುಪಿಯ ಬೆರಳೆಣಿಕೆಯ ಕಾಂಗ್ರೆಸ್ ಪುಂಡರು ಬಂದು ಬ್ಯಾನರ್ ತೆರವು ಮಾಡುವಂತೆ ಒತ್ತಾಯ ಮಾಡಿದ್ದಾರೆ.ತಾಕತ್ತು ಇದ್ರೆ ಸಾವರ್ಕರ್ ಬ್ಯಾನರ್ ತೆಗಿರಿ, ನಿಮ್ಮ ಮನೆಯ ಅಂಗಲದಲ್ಲಿ ಬ್ಯಾನರ್ ಹಾಕುತ್ತೇವೆ. ಸಿದ್ದ ರಾಮಯ್ಯ ಅರಳು ಮರಳಿನಲ್ಲಿ ಹೇಳಿಕೆ ನೀಡುತ್ತಿದ್ದಾರೆ.ಅಂದು ಜಿನ್ನಾ ದೇಶ ವಿಭಜನೆ ಮಾಡಿದರು. ಸಿದ್ದರಾಮಯ್ಯ ಜಿನ್ನಾನ ಮತ್ತೊಂದು ರೂಪ.ಸಿದ್ದರಾಮಯ್ಯ ಮತ್ತೆ ದೇಶ ವಿಭಜನೆ ಮಾಡಲು ಹೊರಟಿದ್ದಾರೆ.ಸಿದ್ದ ರಾಮಯ್ಯನಿಗೆ ತಾಕತ್ತು ಇದ್ರೆ ಸಾವರ್ಕರ್ ಬ್ಯಾನರ್ ತೆರವು ಮಾಡಲಿ. ನಿಮ್ಮ ಮನೆ ಅಂಗಳದಲ್ಲೇ ಬ್ಯಾನರ್ ಹಿಡಿದು ಹೋರಾಟ ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.