UDUPI : ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಿದ ಸಾವರ್ಕರ್ ಬ್ಯಾನರ್ ತೆರವು
Friday, August 19, 2022
ಹಿಂದೂ ಮಹಾಸಭಾ ನಾಯಕರು ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಾಕಿದ್ದ ಸಾವರ್ಕರ್ ಬ್ಯಾನರ್ ತೆರವು ಮಾಡಲಾಯಿತು. ಉಡುಪಿ ನಗರ ಸಭೆಯಿಂದ 15 ದಿನಗಳ ಕಾಲ ಅನುಮತಿ ಪಡೆದಿದ್ದ ಹಿಂದು ಮುಖಂಡರು, ಉಡುಪಿ ಅಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ತೆರವು ಮಾಡಿದ್ದಾರೆ.
ಬ್ರಹ್ಮಗಿರಿ ಸರ್ಕಲ್ ನಿಂದ ಹುತಾತ್ಮ ಸ್ಮಾರಕದವರೆಗೆ ಬ್ಯಾನರ್‌ನ್ನು ಮೆರವಣಿಗೆಯಲ್ಲಿ ತಂದು, ಅಜ್ಜರಕಾಡು ಸ್ಮಾರಕದಲ್ಲಿ ತೆರವು ಮಾಡಲಾಯಿತು. ತೆರವು ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾ ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಭಾಗವಹಿಸಿದವು.