UDUPI : ಆರ್ಥಿಕ ಸಮಸ್ಯೆಯಿಂದ ನೊಂದ ಪೈಂಟರ್ ಆತ್ಮಹತ್ಯೆ
Wednesday, August 17, 2022
ಹಣದ ಸಮಸ್ಯೆಯಿಂದ ನೊಂದ ಪೈಂಟರ್‌ರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಪಡುಬಿದ್ರಿ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ನಡೆದಿದೆ. ಸೋನಿತ್ ಪೂಜಾರಿ(30) ಮೃತರು.
ಅಣ್ಣ ಹಾಗೂ ಅತ್ತಿಗೆಯ ಜೊತೆ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈತನ ಅಣ್ಣ ಹಾಗೂ ಅತ್ತಿಗೆ ಕೆಲಸಕ್ಕೆ ಹೋದ ವೇಳೆ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ತಿಗೆ ಮನೆಗೆ ಬಂದಾಗ ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದು, ಕಿಟಕಿಯಿಂದ ಇಣುಕಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.