
MANGALORE ; ಸುಬ್ರಹ್ಮಣ್ಯ ದಲ್ಲಿ ನಡೆಯಿತು ವಿವಾಹಿತೆಯ ಅತ್ಯಾಚಾರ- ಮದುವೆಯಾಗುತ್ತೇನೆ ಎಂದು ಈತ ಮಾಡಿದ್ದೇನು ಗೊತ್ತಾ?
Thursday, August 4, 2022
ಮಂಗಳೂರು: ವಿವಾಹಿತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಅತ್ಯಾಚಾರ ಮಾಡಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪವನ್ ಅತ್ಯಾಚಾರಗೈದ ಆರೋಪಿ. ಪ್ರಕರಣದ ಸಂತ್ರಸ್ಥ ಯುವತಿಯು ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದ ವೇಳೆ ಆರೋಪಿ ಪವನ್ ಈ ಕೃತ್ಯವೆಸಗಿದ್ದಾನೆ.
ಈ ಘಟನೆ 2022 ಮೇ 20 ರಂದು ಶನಿವಾರ ರಾತ್ರಿ 10 ಗಂಟೆಗೆ ನಡೆದಿದೆ. ಆರೋಪಿ ಪವನ್ ಮದ್ಯಪಾನ ಮಾಡಿಕೊಂಡು ಮಹಿಳೆಯ ಮನೆಗೆ ಬಂದು ಅತ್ಯಾಚಾರ ಮಾಡಿದ್ದಾನೆ. ಮಹಿಳೆ ಈ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸುತ್ತೇನೆ ಎಂದು ಹೇಳಿದಾಗ ಪವನ್ ನು ನಿನ್ನನ್ನು ಮದುವೆಯಾಗುತ್ತೇನೆ ಕಂಪ್ಲೇಟ್ ಮಾಡಬೇಡ ಎಂದು ಹೇಳಿದ್ದಾನೆ.
ನಂತರ ಲಾಯರ್ ಮುಖಾಂತರ ವೀಲಿನಲ್ಲಿ ಒಪ್ಪಿಗೆ ನೀಡಿದ್ದಾನೆ. ಆ ಬಳಿಕ ಈತ ಮಹಿಳೆಯಿಂದ 1,70,000/- ರೂ ವನ್ನು ಪಡೆದುಕೊಂಡಿದ್ದಾನೆ. ಆದರೆ ಬಳಿಕ ಮದುವೆಯಾಗುವುದಿಲ್ಲ ಎಂದು ಹೇಳಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ 80/2022 ಕಲಂ:376,417 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.