MANGALORE- BEACH ನಲ್ಲಿ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ- VIDEO ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿ
Monday, August 1, 2022
ಮಂಗಳೂರು; ಮಂಗಳೂರಿನ ಎನ್ ಐ ಟಿ ಕೆ ಬೀಚ್ ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿ ಯನ್ನು ಅತ್ಯಾಚಾರ ಮಾಡಿ ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮುನಾಝ್ ಅಹಮ್ಮದ್(30) ಬಂಧಿತ ಆರೋಪಿ. ಈತ ಮೀನು ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿಟ್ಟುಕೊಂಡು ಆಕೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು.
ಜು.27 ರಂದು ಎನ್ ಐಟಿಕೆ ಬೀಚ್ ಗೆ ವಿದ್ಯಾರ್ಥಿನಿ ತನ್ನ ಸಹಪಾಠಿಯೊಂದಿಗೆ ಬಂದಿದ್ದಳು. ಬೀಚ್ ಗೆ ಬಂದಿದ್ದ ಇಬ್ಬರನ್ನು ಕಂಡ ಮುನಾಝ್ ಅಹಮದ್ ವಿದ್ಯಾರ್ಥಿನಿಯ ಸಹಪಾಠಿಯನ್ನು ಹೆದರಿಸಿ ಓಡಿಸಿದ್ದಾನೆ.ಆ ಬಳಿಕ ವಿದ್ಯಾರ್ಥಿನಿ ಯ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವೀಡಿಯೋ ವನ್ನು ಮೊಬೈಲ್ ನಲ್ಲಿ ಚಿತ್ರಿಕರಿಸಿ ವಿದ್ಯಾರ್ಥಿನಿ ಗೆ ತೋರಿಸಿ ಕಿರುಕುಳ ನೀಡಲು ಆರಂಭಿಸಿದ್ದು. ವಿದ್ಯಾರ್ಥಿನಿ ಪೊಲೀಸ್ ಕಮೀಷನರ್ ಭೇಟಿ ನೀಡಿ ನಡೆದ ಘಟನೆಯ ಬಗ್ಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.