UDUPI : ಅಪಾಯಮಟ್ಟ ಮೀರಿ ಹರಿಯುತ್ತಿರುವ ಸೌಪರ್ಣಿಕಾ ನದಿ ; ನಾವುಂದದ ಕೆಲ ಮನೆಗಳ ಜಲಾವೃತ
Thursday, July 7, 2022
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು,
ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದೆ. ಬೈಂದೂರು ತಾಲೂಕಿನಲ್ಲಿ ಹರಿಯುವ ಸೌಪರ್ಣಿಕಾ ನದಿ ನೀರು
ನಾವುಂದ ಗ್ರಾಮದ ಕೆಲ ಮನೆ ಆವರಣಕ್ಕೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಗ್ರಾಮವೇ ನಡುಗಡ್ಡೆಯಾಗಿದ್ದು ಜನ, ಜಾನುವಾರುಗಳನ್ನು ಬೇರೆಡೆ ಸ್ಥಳಾಂತರ ಮಾಡುತ್ತಿದ್ದಾರೆ. ನದಿಯ ಮಟ್ಟ ಕ್ಷಣಕ್ಷಣಕ್ಕೂಏರುತ್ತಿದ್ದು, ಇಲ್ಲಿನ ನಡುಗೆಡ್ಡೆ ಪ್ರದೇಶದ ನೂರಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಕೊಲ್ಲೂರಿನ ಅರಣ್ಯ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನೀರಿನ ಮಟ್ಟ ಹೆಚ್ಚುತ್ತಿದೆ... ಜನರು ದೋಣಿಯಲ್ಲಿ ಅಡ್ಡಾಡುವ ಪರಿಸ್ಥಿತಿ ಉಂಟಾಗಿದೆ.