UDUPI : ಭತ್ತದ ಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ನೀರಿಗೆ ಬಿದ್ದು ಸಾವು
Tuesday, July 5, 2022
ಭತ್ತದ ಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ, ಆಕಸ್ಮಿಕವಾಗಿ ನೀರು ತುಂಬಿಕೊಂಡ ಗದ್ದೆಗೆ ಬಿದ್ದು ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಲ್ತೂರು ಎಂಬಲ್ಲಿ ನಡೆದಿದೆ.
ಕೆಳಬೆಟ್ಟು ನಿವಾಸಿ ಶೀನ ಪೂಜಾರಿ ಎಂಬವರ ಪತ್ನಿ ಲಕ್ಷ್ಮೀ ಪೂಜಾರ್ತಿ (66) ಮೃತಪಟ್ಟ ಮಹಿಳೆ. ಲಕ್ಷ್ಮೀ ಪೂಜಾರ್ತಿ ಗದ್ದೆಯಲ್ಲಿ ತುಂಬಿದ್ದ ಮಳೆ ನೀರು ಹರಿಯಲು ಅನುವು ಮಾಡಿಕೊಡಲು ತೆರಳಿದ್ದರು. ಈ ವೇಳೆ
ಆಯ ತಪ್ಪಿ ನೀರು ತುಂಬಿಕೊಂಡ ಗದ್ದೆಗೆ ಬಿದ್ದು ಮೃತ ಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ಸ್ಥಳೀಯ ಸಮಾಜ ಸೇವಕ ಮಲ್ಯಾಡಿ ಶಿವರಾಮ್ ಶೆಟ್ಟಿ ಹಾಗೂ ಗ್ರಾಮ ಲೆಕ್ಕಿಗ ದೀಪಿಕಾ ಶೆಟ್ಟಿ ಭೇಟಿ
ನೀಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.