
UDUPI : ಕಮಲಶಿಲೆ ದೇಗುಲದ ಗರ್ಭ ಗುಡಿ ಒಳಗೆ ನುಗ್ಗಿದ ಕುಜ್ಜಾ ನದಿ ನೀರು ; ದೇವಿಗೆ ವಿಶೇಷ ಆರತಿ
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಸುರಿಯುತ್ತಿದ್ದು, ಜೀವ ನದಿಗಳು ತುಂಬಿ ಹರಿಯುತ್ತಿದೆ. ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ
ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ
ಪಕ್ಕದ ಕುಬ್ಜಾ ನದಿ ತುಂಬಿ ಹರಿದು, ಕಮಲಶಿಲೆ ದೇವಸ್ಥಾನದ ಗರ್ಭ ಗುಡಿ ಒಳಗೆ ನೀರು ಹರಿದು ಬಂದಿದೆ.
ನದಿ ನೀರು ಗರ್ಭಗುಡಿಗೆ ನೀರು ಪ್ರವೇಶಿಸುತ್ತಿದ್ದಂತೆ ದೇವಿಗೆ ಆರತಿ ಸ್ಥಳೀಯ ಭಕ್ತರು ಅರ್ಚಕರ ಸಮ್ಮುಖದಲ್ಲಿ ವಿಶೇಷ ಆರತಿ ಸೇವೆ ನಡೆಯಿತು. ಪ್ರತಿವರ್ಷ ಮಳೆಗಾಲದಲ್ಲಿ ನದಿ ತುಂಬಿ ಹರಿದು, ದೇಗುಲದ ಗರ್ಭ ಗುಡಿಗೆ ಪ್ರವೇಶಿಸುವುದು ಕಮಲಶಿಲೆ ದೇಗುಲದ ವಿಶೇಷ.