
UDUPI : ಮಳೆಯಲ್ಲಿ ಸಿಲುಕಿದ ವೃದ್ದರೊಬ್ಬರ ರಕ್ಷಣೆ : ಕುಟುಂಬಸ್ಥರ ಪತ್ತೆಗೆ ಮನವಿ
ಉಡುಪಿಯ ಅಂಬಲಪಾಡಿ ಬೈಪಾಸ್ ಬಳಿ ಕಳೆದ ಮೂರು ದಿನಗಳಿಂದ ಮಳೆಗೆ ನಲುಗಿದ ವೃದ್ಧರೊಬ್ಬರು ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರ ಪತ್ತೆಗೆ ಮನವಿ ಮಾಡಲಾಗಿದೆ.
ವೃದ್ಧರು ಕಳೆದ ಮೂರು ದಿನಗಳಿಂದ ಅಸ್ವಸ್ಥರಾಗಿ ಮಲಗಿದ್ದಾರೆ ಎಂದು ಸಾರ್ವಜನಿಕ ವಿಶು ಶೆಟ್ಟಿ ಅವರಿಗೆ ತಿಳಿದಿದ್ದು, ಸ್ಥಳಕ್ಕೆ ದಾವಿಸಿದ ವಿಶು ಶೆಟ್ಟಿ ಅವರು ವೃದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆ ದಾಖಲಿಸಿದ್ದಾರೆ. ತೀವ್ರ ನಿತ್ರಾಣರಾಗಿ ನರಳುತ್ತಿದ್ದು, ನಾರಾಯಣ(75) ಹೆಸರು ಎಂದು ಹೇಳಿಕೊಂಡಿದ್ದು, ಕೊಳಲಗಿರಿ ಲಕ್ಷ್ಮಿ ನಗರದಲ್ಲಿ ತಮ್ಮ ಸಂಬಂಧಿಕರಿದ್ದಾರೆ ಎಂದು ತಿಳಿಸಿದ್ದಾರೆ. ಸಂಬಂಧಿಕರು ಜಿಲ್ಲಾಸ್ಪತ್ರೆ ಸಂಪರ್ಕಿಸಲು ವಿಶು ಶೆಟ್ಟಿ ಅವರು ಮನವಿ ಮಾಡಿದ್ದಾರೆ.