
UDUPI : ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಪತ್ನಿ ನಿಧನ
ಕುಂದಾಪುರದ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಪತ್ನಿ ನಾಗರತ್ನ ಶೆಟ್ಟಿ (80) ಬಸ್ರೂರಿನ ತಮ್ಮ ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಧಾರ್ಮಿಕ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮೃತರಿಗೆ ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರಿದ್ದಾರೆ
ಸೋಮವಾರ, ಮಧ್ಯಾಹ್ನ ಕೊಲ್ಲೂರು ಸಮೀಪದ ಕೂಡುರು ಮನೆಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದ್ದು, ಬೆಳಗ್ಗೆ 9ಯಿಂದ ಬಸ್ರೂರಿನ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇಡಲಾಗುವುದು ಅಂತ ಕುಟುಂಬ ಮೂಲಗಳು ತಿಳಿಸಿದೆ.