UDUPI : ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಅನಾರೋಗ್ಯದಿಂದ ಸಾವು
Saturday, July 23, 2022
ಅನಾರೋಗ್ಯದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕು ಮುದ್ರಾಡಿಯ ಬಲ್ಲಾಡಿ ನಿವಾಸಿ ಸುಶಾಂತ್ ಶೆಟ್ಟಿ (32) ಸಾವನ್ಪಿದ್ದಾರೆ. ಇವರು ಇಲಿ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಉಡುಪಿಯ ಫೈನಾನ್ಸ್ ಒಂದರಲ್ಲಿ ಉದ್ಯೋಗಿಯಾಗಿದ್ದ ಸುಶಾಂತ್ ಶೆಟ್ಟಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ತೀವ್ರಗೊಂಡ ಕಾರಣ ನಿನ್ನೆ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರವಾದ ಕಾರಣ ವೈದ್ಯಕೀಯ ಪರೀಕ್ಷೆಯಿಂದ ಇನ್ನಷ್ಟೇ ಬರಬೇಕಿದೆ.