-->

UDUPI : ಕಳವು ಪ್ರಕರಣದ : ನಾಲ್ವರು ಆರೋಪಿಗಳ ಬಂಧನ

UDUPI : ಕಳವು ಪ್ರಕರಣದ : ನಾಲ್ವರು ಆರೋಪಿಗಳ ಬಂಧನ

ಉಡುಪಿ ನಗರದ ತೆಂಕನಿಡಿಯೂರಿನಲ್ಲಿ ಸೆಂಟ್ರಿಂಗ್ ಶೀಟ್ ಹಾಗೂ ಪಿಲ್ಲರ್ ಬಾಕ್ಸ್ ನ್ನು ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಉಡುಪಿಯ ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ದೀಪಕ್ (19), ಸಾಗರ್ (36), ಇಮ್ತಿಯಾಜ್ ಎ (39) ಮತ್ತು ಮೊಹಮ್ಮದ್ ಇಕ್ಬಾಲ್ (35) ಬಂಧಿತರು.  ಜುಲೈ 19ರಂದು ಉಡುಪಿ ತೆಂಕನಿಡಿಯೂರು ಎಂಬಲ್ಲಿ ಸೆಂಟ್ರಿಂಗ್ ಗಾಗಿ ಉಮೇಶ್ ಎಂಬವರು ಸುಮಾರು 600 ಸೆಂಟ್ರಿಂಗ್ ಶೀಟ್ ಮತ್ತು 5-6 ಸೆಟ್ ಪಿಲ್ಲರ್ ಬಾಕ್ಸ್ ನ್ನು ತಮ್ಮ ಮನೆ ಪಕ್ಕದಲ್ಲಿ  ಇಟ್ಟಿದ್ದರು. 

ಆರೋಪಿಗಳು ಸುಮಾರು 1,10,000/- ರೂಪಾಯಿ ಮೌಲ್ಯದ 80 ಸೆಂಟ್ರಿಂಗ್ ಶೀಟ್  ಮತ್ತು 4 ಪಿಲ್ಲರ್  ಬಾಕ್ಸ್ ಸೆಟ್ ಗಳನ್ನು ಕಳವುಗೈದಿದ್ದರು. ಈ ಕುರಿತು ಉಮೇಶ್ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಂಧಿತರಿಂದ ಕಳವಾದ ಸೊತ್ತಿನ ಜೊತೆಗೆ  ಕೃತ್ಯಕ್ಕೆ ಒಳಸಿದ ಗೂಡ್ಸ್  ವಾಹನ ಹಾಗೂ  ದ್ವಿಚಕ್ರ ವಾಹನ ಸೇರಿ ಒಟ್ಟು 1,80,000/- ರೂಪಾಯಿ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99