UDUPI : ಯೂಸರ್ ಐ.ಡಿ. ದುರ್ಬಳಕೆ : 14.76 ಲಕ್ಷ ರೂ. ವಂಚನೆ
Monday, July 18, 2022
ಯೂಸರ್ ಐ.ಡಿ.ಯನ್ನು ದುರ್ಬಳಕೆ ಮಾಡಿಕೊಂಡು 14.76 ಲಕ್ಷ ರೂ. ವಂಚಿಸಿರುವುದಾಗಿ ಉಡುಪಿಯ ಕಾರ್ಕಳದ ಕುಕ್ಕೂಂದೂರಿನ ರುಡಾಲ್ಫ್ ಡಿ'ಸೋಜಾ ದೂರು ದಾಖಲಿಸಿದ್ದಾರೆ. TBO Tak Ltm. ನ ಸ್ಟೈ ಲೈನ್ ಎಂಟರ್ಪ್ರೈಸ್ ಆಂಡ್ ಟ್ರಾವೆಲ್ಸ್ ನಲ್ಲಿ ರುಡಾಲ್ಫ್ ಡಿ'ಸೋಜಾ ವಿಮಾನ ಮತ್ತು ರೈಲು ಟಿಕೇಟ್ ಬುಕ್ ಮಾಡುವ ಫ್ರಾಂಚೈಸಿ ಮಾಲಕನಾಗಿದ್ದಾರೆ. ಇವರುವ, ಈ ಸಂಸ್ಥೆಯಿಂದ IXES112 ಯೂಸರ್ ಐ.ಡಿ.ಯನ್ನು ಹೊಂದಿದ್ದಾರೆ. ಈ ವರ್ಷ ಎಪ್ರಿಲ್ ತಿಂಗಳಿನ ಕೊನೆಯಲ್ಲಿ TBO ಕಂಪೆನಿಯಿಂದ ರುಡಾಲ್ಫ್ ಡಿ ಸೋಜಾ ರವರಿಗೆ ಕರೆ ಮಾಡಿ, ನಿಮ್ಮ ಐ.ಡಿ. ಗೆ ರೂಪಾಯಿ 14,76,284 ಹಣವನ್ನು ಪಾವತಿಸಲಾಗಿದೆ
ಅದನ್ನು ಕೂಡಲೇ ಮರುಪಾವತಿ ಮಾಡುವಂತೆ ತಿಳಿಸಿರುತ್ತಾರೆ. ಆದರೆ ಐಡಿಯನ್ನು ಕಳೆದ 2 ವರ್ಷಗಳಿಂದ ಬಳಸಿರುವುದಿಲ್ಲ, ಆದ್ದರಿಂದ ಸಂಸ್ಥೆಯಲ್ಲಿ ಸೆಲ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿರುವ ಆರೋಪಿಗಳು ಐ.ಡಿ.ಯ ಪಾಸ್ ವರ್ಡ್ ರಿಸೆಟ್ ಮಾಡಿಸಿಕೊಂಡು, ರುಡಾಲ್ಫ್ ಡಿ'ಸೋಜಾ ರವರೇ ಸಂಸ್ಥೆಯ ಐ.ಡಿ.ಯನ್ನು ಬಳಸುತ್ತಿರುವಂತೆ ಬಿಂಬಿಸಿ, ಕಂಪೆನಿಯಿಂದ ಬಂದಿರುವ ಹಣವನ್ನು ಟಿಕೆಟ್ ಬುಕ್ಕಿಂಗ್ ಖರ್ಚು ಮಾಡಿ, ಹಣ ಮರುಪಾವತಿಸದೇ ಕಂಪೆನಿಗೆ ಹಾಗೂ ರುಡಾಲ್ಫ್ ಡಿ ಸೋಜಾ ರವರಿಗೆ ನಷ್ಟ ಉಂಟು ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.