
ಶಿರೂರು TOLLGATE ಗೆ ಅಂಬುಲೆನ್ಸ್ ಡಿಕ್ಕಿ ಪ್ರಕರಣ- ಮಲಗಿದ್ದ ದನ ತಪ್ಪಿಸಲು ಹೋದಾಗ ನಡೆಯಿತು ದುರಂತ -ಮತ್ತೊಂದು ವಿಡಿಯೋ ಲಭ್ಯ
ಉಡುಪಿ: ಶಿರೂರು ಟೋಲ್ ನಲ್ಲಿ ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಉಡುಪಿ ಆದರ್ಶ ಆಸ್ಪತ್ರೆಗೆ ಹೋಗುತ್ತಿದ್ದ ಅಂಬುಲೆನ್ಸ್ ಟೋಲ್ ದಾರಿಯಲ್ಲಿ ಮಲಗಿದ್ದ ದನವನ್ನು ತಪ್ಪಿಸಲು ಹೋಗಿ ಮಗುಚಿ ಬಿದ್ದ ಘಟನೆ ನಡೆದಿದೆ.
ಘಟನೆಯಲ್ಲಿ ಅಂಬುಲೆನ್ಸ್ ಒಳಗಿದ್ದ ಹೃದಯ ರೋಗಿಯಾದ ಗಜಾನನ ಗಣಪತಿ ನಾಯ್ಕ್ ಹಾಗೂ ಅವರ ಸಂಬಂದಿಗಳಾದ ಮಂಜುನಾಥ ನಾಯ್ಕ್, ಜ್ಯೋತಿ ನಾಯ್ಕ್, ಲೋಕೇಶ್ ನಾಯ್ಕ್ ರವರು ಮೃತ ಪಟ್ಟಿದ್ದಾರೆ. ಅಂಬುಲೆನ್ಸ್ ಒಳಗಿದ್ದ ಗಣೇಶ್ ನಾಯ್ಕ್, ಗೀತಾ ಗಜಾನನ ನಾಯ್ಕ್, ಶಶಾಂಕ್ ನಾಯ್ಕ, ಅಂಬುಲೆನ್ಸ್ ಚಾಲಕ ರೋಷನ್ ಹಾಗೂ ಟೋಲ್ ಸಿಬ್ಬಂದಿ ಶಂಬಾಜಿ ಘೋರ್ಪಡೆರವರು ಗಾಯಗೊಂಡಿದ್ದು ಹೆಚ್ವಿನ ಚಿಕಿತ್ಸೆಗೆ ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.