ಬೆಳ್ತಂಗಡಿ : ಮಲಗಿದ್ದ ಪತಿಯ ತಲೆ ಕಡಿದು ಕೊಲೆ ಮಾಡಿದ ಪತ್ನಿ
Tuesday, July 5, 2022
ಮಂಗಳೂರು; ಮಲಗಿದ್ದ ಗಂಡನ ತಲೆಯನ್ನು ಕತ್ತಿಯಿಂದ ಕಡಿದು ಪತ್ನಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಅಬ್ಬನ್ ಕೆರೆ ಎಂಬಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 5.30 ಕ್ಕೆ ಈ ಘಟನೆ ನಡೆದಿದೆ. ಹತ್ಯೆ ಮಾಡಿದ ಪತ್ನಿ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಅಬ್ಬನ್ ಕೆರೆ ಯ ನಿವಾಸಿ ಯೋಹನಾನ್ ಯಾನೆ ಬೇಬಿ ಕೊಲೆಯಾದ ವ್ಯಕ್ತಿ. ಮಾನಸಿಕ ಅಸ್ವಸ್ಥೆ ಎಲಿಯಮ್ಮ(56) ಹತ್ಯೆ ಮಾಡಿದ ಆರೋಪಿ .
ಎಲಿಯಮ್ಮರವರು ಸುಮಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆಕೆಗೆ ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಎಲಿಯಮ್ಮ ಇಂದು ಮುಂಜಾನೆ 5.30 ಗಂಟೆ ಸಮಯಕ್ಕೆ ಮನೆಯ ಕೋಣೆಯ ಒಳಗೆ ಮಂಚದಲ್ಲಿ ಮಲಗಿದ್ದ ಪತಿ ಯೋಹನಾನ್ ಯಾನೆ ಬೇಬಿ ಯವರ ತಲೆಯ ಭಾಗಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.