" ಮಿಸ್ ಇಂಡಿಯಾ 2022" ಸಿನಿ ಶೆಟ್ಟಿಗೆ ನಾಳೆ ಹುಟ್ಟೂರ ಸನ್ಮಾನ
Monday, July 18, 2022
ಮಿಸ್ ಇಂಡಿಯಾ 2022 ಕಿರೀಟ ಮುಡಿಗೇರಿಸಿಕೊಂಡ ಉಡುಪಿ ಮೂಲದ ಸಿನಿ ಶೆಟ್ಟಿ ಅವರಿಗೆ ನಾಳೆ ಉಡುಪಿಯಲ್ಲಿ ಹುಟ್ಟೂರ ಅದ್ದೂರಿ ಸನ್ಮಾನ ನಡೆಯಲಿದೆ.
ಉಡುಪಿ ಮೂಲದ ಸಿನಿ ಶೆಟ್ಟಿ ಈಗಾಗಲೇ ಹುಟ್ಟೂರಿಗೆ ಆಗಮಿಸಿದ್ದು, ನಾಳೆ ಮಧ್ಯಾಹ್ನ, ಉಡುಪಿ ಜೋಡುಕಟ್ಟೆಯಿಂದ ತೆರದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರು ಕಿರಣ್ ಕೂಡ ಭಾಗವಹಿಸಲಿದ್ದಾರೆ. ಬಳಿಕ ಬೆಳ್ಳಂಪಳ್ಳಿಯಲ್ಲಿರುವ ಭೂತರಾಜ ದೇವಸ್ಥಾನಕ್ಕೆ ಭೇಟಿ ನೀಡಿ
ಪೂಜೆ ಸಲ್ಲಿಸಲಿದ್ದಾರೆ. ಸಂಜೆ ಕಾಪು ಮಾಡಿಗುಡಿ ಭೇಟಿ ನೀಡೊ ದೇವಿ ದರ್ಶನ ಪಡೆಯಲಿದ್ದಾರೆ..