-->
ads hereindex.jpg
ಮಂಗಳೂರಿನಲ್ಲಿ ಇಂದು, ನಾಳೆ ( ಜುಲೈ 20, 21) ವಿದ್ಯುತ್ ವ್ಯತ್ಯಯ

ಮಂಗಳೂರಿನಲ್ಲಿ ಇಂದು, ನಾಳೆ ( ಜುಲೈ 20, 21) ವಿದ್ಯುತ್ ವ್ಯತ್ಯಯ

ಮಂಗಳೂರು: 110/11 ಕೆ.ವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.

ಆದ ಕಾರಣ ಜು.20ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯಿದೆ, ಕೆಸರಗದ್ದೆ, ಪೆಲಕುಂಜ, ಶಾಂತಿನಗರ, ಮೂಡಾಯಿಕಾಡು, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಬಸವನಕಜೆ, ಅಮನೊಟ್ಟು, ಆನೆಗುಡ್ಡೆ, ಜೋಗೊಟ್ಟು, ವಾಲ್ಪಾಡಿ, ಶಿರ್ತಾಡಿ, ಮಕ್ಕಿ, ಶಿಮುಂಜೆ, ಅಳಿಯೂರು, ಬೋರುಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಕುಲಶೇಖರ, ಎಕ್ಕೂರು, ಪಂಪ್‍ವೆಲ್

110/33/11ಕೆ.ವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆ.ವಿ ಎಕ್ಕೂರು ಫೀಡರ್ ಮತ್ತು 11ಕೆ.ವಿ ಪಂಪ್‍ವೆಲ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಆದ ಕಾರಣ ಜು.20ರ ಬೆಳಿಗ್ಗೆ 9.30 ರಿಂದ 5.30ರವರೆಗೆ ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೇಕಾರ್, ಜೆಪ್ಪಿನಮೊಗರು, ತಾರೆದೊಲ್ಯ, ತಂದೊಳಿಗೆ, ಡೆನ್ಮಾರ್ಕ್ ಲೇಔಟ್, ವಾಸುಕೀನಗರ, ಅಳಕೆ ಮಠ, ಪರಂಜ್ಯೋತಿ ಭಜನಾ ಮಂದಿರ, ಕನಕರಬೆಟ್ಟು, ರಾಮ್‍ತೋಟ, ಕುಡುಪ್ಪಾಡಿ ತೋಟ, ಸದಾಶಿವ ನಗರ, ಪಡೀಲ್ ಜಂಕ್ಷನ್, ಕಂಕನಾಡಿ ರೈಲ್ವೇ ಸ್ಟೇಷನ್, ನಾಗುರಿ, ಗರೋಡಿ, ಬಲಿಪಮಾರ್, ಮಹಾಲಿಂಗೇಶ್ವರ ದೇವಸ್ಥಾನ, ನೇತ್ರಾವತಿ ಲೇಔಟ್, ಪಂಪ್‍ವೆಲ್, ಪ್ರಶಾಂತ್‍ಭಾಗ್, ಗ್ಯಾಸ್ ಗೋಡೌನ್, ಸೈಮಾನ್ ಲೇನ್, ಮೇಘನಗರ, ಗುಡ್ಡೆತೋಟ, ರೆಡ್‍ಬಿಲ್ಲಿಂಗ್, ಕೆಂಬಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.  

ಕುದ್ರೋಳಿ, ಕಾರ್‍ಸ್ಟ್ರೀಟ್

33/11 ಕೆ.ವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕಾರ್‍ಸ್ಟ್ರೀಟ್ ಫೀಡÀರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಆದ ಕಾರಣ ಜು.20ರ ಬೆಳಿಗ್ಗೆ 10 ರಿಂದ 5ರವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾರ್‍ಸ್ಟ್ರೀಟ್, ದಯಾನಂದ ಪೈ ಕಾಲೇಜ್, ಮಹಾಮಾಯಿ ಟೆಂಪಲ್ ರಸ್ತೆ, ಕಾಪೆರ್Çೀರೇಷನ್ ಬ್ಯಾಂಕ್, ಗೋಪಾಲ ಕೃಷ್ಣ ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ
ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.  

ಕದ್ರಿ

33/11 ಕೆ.ವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆ.ವಿ ಶಿವಭಾಗ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

 ಆದ ಕಾರಣ ಜು.20ರ ಬೆಳಿಗ್ಗೆ 10 ರಿಂದ 4ರವರೆಗೆ ಶಿವಭಾಗ್ 1ರಿಂದ 5ನೇ ಕ್ರಾಸ್‍ವರೆಗೆ, ತಾರೆತೋಟ, ಇ.ಎಸ್., ಗೀತಾಂಜಲಿ, ಲೋವರ್ ಬೆಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
  
ಕುದ್ರೋಳಿ, ಡೊಂಗರಕೇರಿ

33/11 ಕೆ.ವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆ.ವಿ ಡೊಂಗರಕೇರಿ ಫೀಡರ್ ಮತ್ತು 33/11ಕೆ.ವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ಸೌತ್‍ವಾರ್ಫ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಆದ ಕಾರಣ ಜು.21ರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಸಿಟಿ ಸೆಂಟರ್, ಕೊಡಿಯಾಲ್‍ಬೈಲ್, ಡಿಸ್ಟ್ರಿಕ್ಟ್ ಕೋರ್ಟ್, ಕರ್ನಾಟಕ ಬ್ಯಾಂಕ್, ಅಲೋಶಿಯಸ್ ಕಾಲೇಜ್, ಜಯಶ್ರೀ ಹಾಸ್ಪಿಟಲ್, ಮನೋರಮ ಹೋಟೆಲ್, ಪಂಚವಟಿ ಲೇನ್, ಹ್ಯಾಮಿಲ್ಟನ್ ಸರ್ಕಲ್, ಧಕ್ಕೆ ಓಲ್ಡ್ ಪೋರ್ಟ್ ಗೇಟ್, ಬದ್ರಿಯಾ ರೋಡ್, ಗೂಡ್ ಶೆಡ್ ರಸ್ತೆ, ಬ್ಯಾಂಬೂ ಬಜಾರ್, ನೀರೇಶ್ವಲ್ಯ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2