
UDUPI : ಬುಲ್ಡೋಜರ್ ಪ್ರಯೋಗ ರಾಜ್ಯದಲ್ಲಿ ಇಲ್ಲ: ಆರಗ ಜ್ಞಾನೇಂದ್ರ
ಯುಪಿ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗ ರಾಜ್ಯದಲ್ಲಿ ಮಾಡುವಂತಹ ಸನ್ನಿವೇಶ ಇನ್ನೂ ಸೃಷ್ಟಿಯಾಗಿಲ್ಲ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು , ಉತ್ತರಪ್ರದೇಶ ಮಾದರಿಯ ಪರಿಸ್ಥಿತಿ ಕರ್ನಾಟಕದಲ್ಲಿ ಇನ್ನೂ ನಿರ್ಮಾಣವಾಗಿಲ್ಲ. ರಾಜ್ಯದಲ್ಲಿ ಕಾನೂನನ್ನು ಪಾಲಿಸುವ ಮನಸ್ಥಿತಿ ಇನ್ನೂ ಉಳಿದುಕೊಂಡಿದೆ. ಇನ್ನೂ ಮಂಡಿಸಲು ಹಲವು ವಿಧೇಯಕಗಳಿವೆ ಮತಾಂತರ ನಿಷೇಧ ಕಾನೂನು ವಿಧಾನಪರಿಷತ್ ನಲ್ಲಿ ಒಪ್ಪಿಗೆ ಪಡೆಯಲು ಬಾಕಿ ಉಳಿದಿದೆ ಎಂದರು. ರಾಹುಲ್ ಗಾಂಧಿ ಇಡಿ ವಿಚಾರಣೆ ಕುರಿತು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನವರಿಗೊಂದು ಕಾನೂನು ಉಳಿದವರಿಗೊಂದು ಕಾನೂನು ಇಲ್ಲ. ರಾಹುಲ್ ಗಾಂಧಿ ತನಿಖೆ ಎದುರಿಸಬೇಕು. ನಿರಪರಾಧಿಯಾಗಿದ್ದರೆ ಅವರು ಹೊರ ಬರುತ್ತಾರೆ ,ಅಪರಾಧ ಮಾಡಿದ್ದರೆ ಶಿಕ್ಷೆಯಾಗುತ್ತದೆ.ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ ಎಂದರು.