UDUPI: ಉಡುಪಿ ಸರ್ಕಾರಿ ಪಿಯು ಕಾಲೇಜಿನ ದಾಖಲಾತಿಯಲ್ಲಿ ಏರಿಕೆ
Saturday, June 4, 2022
ಹಿಜಾಬ್ ವಿವಾದದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಉಡುಪಿಯ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ, ಈ ಬಾರಿ ವಿದ್ಯಾರ್ಥಿನಿಯರು ಬರ್ತಾರೋ? ಇಲ್ವೋ? ಅಂತ ಆಡಳಿತ ಮಂಡಳಿಗೆ ಚಿಂತೆಯಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಈ ಬಾರಿ ಪ್ರಥಮ ಪಿಯುಸಿಗೆ ದಾಖಲಾತಿ ಆಗಿದ್ದು, ಆಡಳಿತ ಮಂಡಳಿಗೆ ಖುಷಿ ತಂದಿದೆ. ಕಳೆದ ಬಾರಿ, ಕಾಲೇಜಿನಲ್ಲಿ 253 ಮಂದಿ ದ್ವಿತೀಯ ಪಿಯುಸಿಯಿಂದ ಪಾಸಾಗಿದ್ದರು. ಈ ಬಾರಿ ಪ್ರಥಮ ಪ್ರಥಮ ಪಿಯುಸಿಗೆ, ಈಗಾಗಲೇ 253 ಮಂದಿ ದಾಖಲಾಗಿದ್ದಾರೆ. ಅಲ್ಲದೇ ೧೦೦ ಕ್ಕೂ ಅಧಿಕ ಮಂದಿ ಅಪ್ಲಿಕೇಶನ್ ಪಡೆದಿದ್ದಾರೆ. ಹೀಗಾಗಿ ಕಳೆದ ಬಾರಿಗೆ ಹೊಲಿಸಿದ್ರೆ ಈ ಬಾರಿ ಸುಮಾರು 150 ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಜೊತೆಗೆ ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ಇದೇ ಕಾಲೇಜಿಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹೊಸ ವಿಭಾಗವನ್ನು ತೆರೆಯುದಕ್ಕೆ ಆಡಳಿತ ಮಂಡಳಿ ನಿರ್ಧರಿಸಿದೆ. ಇನ್ನೂ ಈ ಬಾರಿ ಕಾಲೇಜಿನಲ್ಲಿ ಪ್ರತಿ ದಿನ ವಿವಾದ, ಸುದ್ದಿ, ಪೊಲೀಸ್ ಬಂದಾವಸ್ತ್ ಅಂತ ಉಪನ್ಯಾಸಕರು ಕೂಡ ರೋಸಿ ಹೋಗಿ ಹೆಚ್ಚಿನವರು ವರ್ಗಾವಣೆ ಕೂಡ ಬಯಸಿದ್ದರು. ಇದ್ರ ಜೊತೆಗೆ ಪ್ರತಿನಿತ್ಯ ವಿವಾದದಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇರಲಿಲ್ಲ, ಸದ್ಯ ನಿರೀಕ್ಷೆ ಮೀರಿ ವಿದ್ಯಾರ್ಥಿಗಳ ದಾಖಲಾತಿ ಆಗಿದ್ದು ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎನ್ನುವುದು ಸಾಬೀತಾಯಿತು ಅನ್ನೋದು ಆಡಳಿತ ಮಂಡಳಿಯವರ ಮಾತು.