UDUPI : ಉಡುಪಿಯ ಹಲವೆಡೆ ಗಾಳಿ ಮಳೆ ; ಮರ ಬಿದ್ದ ಮನೆಗಳಿಗೆ ಹಾನಿ
Saturday, June 25, 2022
ಉಡುಪಿ ಜಿಲ್ಲೆಯ ಹೆಜಮಾಡಿ, ಪಡುಬಿದ್ರಿ ಸುತ್ತಮುತ್ತ ಸುರಿದ ಭಾರೀ ಗಾಳಿ ಮಳೆಗೆ ಪಡುಬಿದ್ರಿ, ಹೆಜಮಾಡಿ ಗ್ರಾಮದಲ್ಲಿನ ಕೆಲವೆಡೆಗಳಲ್ಲಿ ಮರ ಬಿದ್ದು ಮನೆಗಳಿಗೆ ಹಾನಿಯಾಗಿದೆ.
ಪಡುಬಿದ್ರಿ ನಡ್ಪಾಲು ಗ್ರಾಮದ ಕಂಚಿನಡ್ಕದ ಸುಶೀಲಾ ಅವರ ಮನೆಗೆ ಮರವೊಂದು ಬಿದ್ದು ಸುಮಾರು 50,000 ರೂ. ನಷ್ಟ ಸಂಭವಿಸಿದೆ. ಗ್ರಾ.ಪಂ. ಕಚೇರಿ ಬಳಿಯ ರಾಮಚಂದ್ರ ಆಚಾರ್ಯರ ಮನೆ ಬಳಿಯ ಶೆಡ್ ಮೇಲೆ ಮಾವಿನ ಮರದ ಮರ ಬಿದ್ದು ಸುಮಾರು 30,000 ರೂ. ನಷ್ಟ ಸಂಭವಿಸಿದೆ.
ಇನ್ನು ಹೆಜಮಾಡಿ ಬಸ್ ನಿಲ್ದಾಣದ ಬಳಿಯ ಪಡುಮನೆ ಸದಾಶಿವ ಆಚಾರ್ಯರ ಮನೆ ಮೇಲೆ ಬೃಹತ್ ಆಲದ ಮರದ ರೆಂಬೆಯೊಂದು ಮುರಿದು ಬಿದ್ದು ಸುಮಾರು 1 ಲಕ್ಷರೂ. ಗಳಿಗೂ ಅಧಿಕ ನಷ್ಟ ಸಂಭವಿಸಿದೆ.