
UDUPI : ಮಹಿಷಮರ್ದಿನಿಗೆ ಮಲ್ಲಿಗೆ ಅಟ್ಟಿಯಲ್ಲಿ ಶಯನೋತ್ಸವ
ಉಡುಪಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ಬ್ರಹ್ಮಕುಂಭಾಭಿಷೇಕ ನಡೆದು, ರಾತ್ರಿ ವಿಶೇಷವಾಗಿ ಮಲ್ಲಿಗೆ ಅಟ್ಟಿಯಲ್ಲಿ ಶಯನೋತ್ಸವ ಸಂಪನ್ನಗೊಂಡಿತು. ರಾತ್ರಿ ದೇವರ ದರ್ಶನ, ಬಲಿ ಉತ್ಸವ, ಏಕಾಂತ ಸೇವೆಯ ಅನಂತರ ನಡೆಯಲ್ಪಡುವ ದೇವಿಯ ಶಯನದ ವ್ಯವಸ್ಥೆಯನ್ನು ವಿಶೇಷವಾಗಿ ಮಾಡುವ ನಿಟ್ಟಿನಲ್ಲಿ ಬಾಳೆನಾರಿನಿಂದ ಕಟ್ಟಲ್ಪಟ್ಟ ಸುಮಾರು 600 (2,400 ಚೆಂಡುಗಳು) ಅಟ್ಟಿಗಿಂತಲೂ ಹೆಚ್ಚು ಶಂಕರಪುರ ಮಲ್ಲಿಗೆಯನ್ನು ಬಳಸಲಾಯಿತು. ರಾತ್ರಿ 1 ಗಂಟೆ ಸುಮಾರಿಗೆ ನಡೆದ ಶಯನೋತ್ಸವವನ್ನು ಕಿಕ್ಕಿರಿದು ನೆರದ ಭಕ್ತರು ಕಂಡು ಕಣ್ತುಂಬಿಕೊಂಡರು. ಬೆಳಗ್ಗೆ ಭಕ್ತರಿಗೆ ಪ್ರಸಾದ ರೂಪವಾಗಿ ಅದೇ ಮಲ್ಲಿಗೆ ಹೂವನ್ನು ವಿತರಿಸಲಾಯಿತು. ಮಹಿಳೆಯರು, ಯುವತಿಯರು ಹೂವಿನ ಪ್ರಸಾದ ಸ್ವೀಕರಿಸಿದರು.