
UDUPI : ಮರದಿಂದ ಜಾರಿಬಿದ್ದು ವ್ಯಕ್ತಿ ಸಾವು
ಶೇಂದಿ ತೆಗೆಯಲು ತೆಂಗಿನ ಮರವೇರಿದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಮರದಿಂದ ಜಾರಿಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.
ಉಳಿಯಾರಗೋಳಿ ನಿವಾಸಿ ವಿನೋದರ ಎ. ಸನಿಲ್ (55) ಮರದಿಂದ ಬಿದ್ದು ಮೃತಪಟ್ಟವರು. ಮೊದಲಿನಿಂದಲೂ ಸಾಂಪ್ರದಾಯಿಕ ಶೈಲಿಯಲ್ಲಿ ಶೇಂದಿ ತೆಗೆಯುತ್ತಿದ್ದ ವಿನೋದರ ಸನಿಲ್ ಅವರು ಜೂನ್ 4 ರಂದು ಎಂದಿನಂತೆ ಶೇಂದಿ ತೆಗೆಯಲು ತೆಂಗಿನ ಮರವೇರಿದ್ದರು.
ಶೇಂದಿ ತೆಗೆಯುವ ವೇಳೆ ತೆಂಗಿನ ಕೊಂಬನ್ನು ಕತ್ತಿಯಿಂದ ತುಂಡು ಮಾಡುವಾಗ ಆಕಸ್ಮಿಕವಾಗಿ ಅವರ ಎಡಕೈ ಮಣಿಗಂಟಿಗೆ ತಾಗಿ ರಕ್ತ ಗಾಯವಾಗಿ ಮರದಿಂದ ಕೆಳಗೆ ಬಿದ್ದಿದ್ದರು. ಮರದಿಂದ ಬಿದ್ದವರನ್ನು ವಿನೋದರ್ ಅವರ ಮಗ ಮತ್ತು ಸ್ಥಳೀಯರು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು, ಅಲ್ಲಿ ಚಿಕಿತ್ಸೆ ಗೆ ಸ್ಪಂದಸದ ಹಿನ್ನಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿಯೇ ಇದ್ದ ವಿನೋದರ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ.