
UDUPI: ದಾರಿಯಲ್ಲಿ ಸಿಕ್ಕಿದ 40 ಪವನ್ ಚಿನ್ನವಿದ್ದ ಬ್ಯಾಗ್‌ನ್ನು ವಾರಸುದಾರರಿಗೆ ತಿಂದಿರುಗಿಸಿದ ಪ್ರಾಮಾಣಿಕ..!
Sunday, June 12, 2022
ದಾರಿಯಲ್ಲಿ ಬಿದ್ದು ಸಿಕ್ಕಿದ 40 ಪವನ್ ಚಿನ್ನವಿದ್ದ ಬ್ಯಾಗ್‌ನ್ನು
ವಾರಸುದಾರರಿಗೆ ತಿಂದಿರುಗಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಚೊಕ್ಕಾಡಿಯಲ್ಲಿ ನಡೆದಿದೆ. ಶಂಕರಪುರದ ಕೆನ್ಯೂಟ್ ಮೋನಿಸ್ ಅವರಿಗೆ, ಕಟಪಾಡಿ ಶಿರ್ವ ನಡುವಿನ ಚೊಕ್ಕಾಡಿಯ ರೈಲ್ವೆ ಸೇತುವೆ ಬಳಿ ತೆರಳುತ್ತಿದ್ದಾಗ ಬ್ಯಾಗ್‌ನ್ನು ಬಿದಿರುವುದು ಗಮನಕ್ಕೆ ಬಂತು. ಬ್ಯಾಗ್ ತೆಗೆದು ನೋಡಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿತ್ತು. ನಂತರ ಬ್ಯಾಗ್‌ನ್ನು ಕಟಪಾಡಿ ಹೊರ ಠಾಣೆಗೆ ನೀಡಿದರು. ಇದೇ ವೇಳೆ ಚಿನ್ನಾಭರಣ ಕಳೆದುಕೊಂಡಿದ್ದ ಅನ್ಸಿರಾ ಬಾನು ಕಟಪಾಡಿ ಪೇಟೆಯಲ್ಲಿ ರಿಕ್ಷಾ ಚಾಲಕರ ಜೊತೆಗೆ ಬ್ಯಾಗ್ ಕಳೆದುಕೊಂಡ ಬಗ್ಗೆ ವಿಚಾರಿಸುತ್ತಿದ್ದರು. ರಿಕ್ಷಾ ಚಾಲಕರು ನೀಡಿದ ಮಾಹಿತಿಯಂತೆ ಠಾಣೆಗೆ ಹೋಗಿ ಬ್ಯಾಗ್ ಕಳೆದುಕೊಂಡ ಮಹಿಳೆ ಪೊಲೀಸರಿಗೆ ತಿಳಿಸಿದರು. ಮಹಿಳೆ ನೀಡಿದ ಮಾಹಿತಿ ಹಾಗೂ ಬ್ಯಾಗ್ ನಲ್ಲಿದ್ದ ವಸ್ತುಗಳು ಪರಸ್ಪರ ತಾಳೆಯಾಗಿದ್ದು, ಪೊಲೀಸರು ಬ್ಯಾಗ್ ತಿಂದಿರುಗಿಸಿದ್ದಾರೆ..