UDUPI ಬಲು ಅಪರೂಪ ಈ ಜೋಡಿ..!
Wednesday, June 8, 2022
ಉಡುಪಿಯ ಕಾರ್ಕಳದಲ್ಲಿ ಬಲು ಅಪರೂಪದ ಜೋಡಿಯ ಮದುವೆಯೊಂದು ನಡೆದಿದೆ. ಮದುವೆಗೆ ಬಂದವರಿಗೆ
ತಕ್ಷಣಕ್ಕೆ ಇದು ಬಾಲ್ಯ ವಿವಾಹದಂತೆ ಬಾಸವಾದ್ರು, ಬಾಲ್ಯ ವಿವಾಹ ಅಲ್ಲ. ಕುಳ್ಳ ದೇಹದ ಜೋಡಿಯೊಂದು ಸತಿಪತಿಗಳಾಗಿ ವೈವಾಹಿಕ ಜೀವನ ಆರಂಭಿಸಿದ್ದು, ವರನ ಎತ್ತರ 4 ಅಡಿ. ವಧುವಿನ ಎತ್ತರವೂ ಅಷ್ಟೇ. ವಧು ಹಿರಿಯಡ್ಕ ನಿವಾಸಿ ಶ್ರೀಕೃತಿ. ವರನ ಹೆಸರು ಹರ್ಷಿತ್ ಕುಮಾರ್. ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಅಪರೂಪದ ಜೋಡಿಯ ಮದುವೆ ನಡೆದಿದ್ದು, ಗುರು ಹಿರಿಯರಿದ್ದು ನಿಶ್ಚಯಿಸಿದ ಮದುವೆಗೆ ನೆಂಟರಿಷ್ಟರು, ಸ್ನೇಹಿತರು ಮದುವೆ ಬಂದು ವಿಶೇಷ ಜೋಡಿಯನ್ನು ಹಾರಿಸಿದರು.