
UDUPI - ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಮನೆ
ಉಡುಪಿ ನಗರದ ಬುಡ್ನಾರ್‌ವಿನ ಮುಸ್ತಕ್ ಅಲಿ ಎಂಬವರ ಮನೆಯಲ್ಲಿ ಬೆಳಗಿನ ಜಾವ ಬೆಂಕಿ ಅವಘಡವಾಗಿದೆ.
ಬೆಳಗ್ಗೆ ಎರಡು ಗಂಟೆ ಸುಮಾರಿಗೆ, ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿದ್ದು, ಮನೆ ಹೊತ್ತಿ ಉರಿದಿದೆ. ಕೂಡಲೇ ಮನೆಯವರು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಅವಘಡ ಅವಘಡ ಸಂಭವಿಸುದನ್ನು ತಡೆದಿದ್ದಾರೆ. ಬೆಂಕಿ ತಗುಲಿದಾಗ ಮನೆಯಲ್ಲಿ ಇದ್ದವರು ಹೊರಗೆ ಬಂದ ಕಾರಣವ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದ್ದು, ಸುಮಾರು ೫೦ ಸಾವಿರ ನಷ್ಟ ಉಂಟಾಗಿದೆ ಅಂತ ಅಂದಾಜಿಸಲಾಗಿದೆ