
ಶಿಲ್ಪಾ ಆತ್ಮಹತ್ಯೆ ಪ್ರಕರಣ; ಅಜೀಜ್ ಪೊಲೀಸರ ವಶಕ್ಕೆ
ಉಡುಪಿಯ ಕುಂದಾಪುರದ ಉಪ್ಪಿನ ಕುದ್ರು ನಿವಾಸಿ ಶಿಲ್ಪಾ ಸಾವಿಗೆ ಸಂಬಂಧಿಸಿದಂತೆ ಶಿಲ್ಪಾ ಪ್ರಿಯತಮ ಅಜೀಜ್ ಎಂಬಾತನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇ 23ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಶಿಲ್ಪಾ ದೇವಾಡಿಗ, ಚಿಕಿತ್ಸೆ ಫಲಕಾರಿಯಾಗದೆ ಮೇ 25ರಂದು ಸಾವನ್ಪಿದ್ದಳು. ಶಿಲ್ಪಾ ಆತ್ಮಹತ್ಯೆಗೆ ಮತಾಂತರ ಒತ್ತಾಯ ಮತ್ತು ಲವ್ ಜಿಹಾದ್ ಕಾರಣ ಅಂತ ಆರೋಪ ಕೇಳಿಬಂದಿತ್ತು. ಮದುವೆಯಾಗಿದ್ದರೂ ಶಿಲ್ಪಾ ದೇವಾಡಿಗ ಜೊತೆ ಅಜೀಜ್ ಅಜೀಜ್ ಸಂಬಂಧ ಇಟ್ಟುಕೊಂಡಿದ್ದ. ಶಿಲ್ವಾಳ ನಗ್ಮ ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ ಎನ್ನುವ ಆರೋಪ ಕೇಳಿಬಂದಿತ್ತು. ಶಿಲ್ಪಾ ಪೋಷಕರು ಆತ್ಮಹತ್ಯೆಗೆ ಆಜೀಜ್ ಕಾರಣ ಅಂತ ದೂರು ನೀಡಿದ್ದರು..